ಹರಿಹರ, ಜು.28- ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅಂಗಾ ರಕ ಸಂಕಷ್ಟ ಚತುರ್ಥಿ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಏರ್ಪಡಿಸಲಾಗಿತ್ತು.
ಸ್ಥಳೀಯ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಹಾಗೂ ಮರ್ಚೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಈ ವಿಶೇಷ ಪೂಜೆ ಪ್ರಾಯೋಜಕರಾಗಿದ್ದರು.
ಎಪಿಎಂಸಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಮಾಜಿ ಅಧ್ಯಕ್ಷ ಅಮರಾವತಿ ಮಹಾದೇವಪ್ಪ ಗೌಡ್ರು, ಚೇಂಬರ್ ಆಫ್ ಕಾಮರ್ಸ್‌ನ ಶಂಕರ್ ಖಟಾವ್‌ಕರ್, ಹೆಚ್.ಬಸವರಾಜಪ್ಪ, ಆರ್.ಆರ್.ಕಾಂತರಾಜ್, ಹೆಚ್.ಶ್ರೀಧರ್‌ಮೂರ್ತಿ, ಮಲ್ಲಿಕಾರ್ಜುನ್, ಬಿಳೇಬಾಳ ಗವಿಯಪ್ಪ, ಹೆಚ್.ಪಿ.ಬಾಬಣ್ಣ, ಕಾಳಪ್ಪ ಬೊಂಗಾಳೆ, ಡಾ.ಅಂದನೂರು ಚೇತನ್, ನಲ್ಲೂರು ನಾಗರಾಜ್, ಡಿ.ಗೋಪಾಲರಾವ್, ಮಾಲತೇಶ್ ಭಂಡಾರಿ, ಎಂ.ಶಿವಾ ನಂದಪ್ಪ, ಆರ್.ವಿ.ಶ್ರೀನಿವಾಸ್ ಶೆಟ್ಟಿ ಮತ್ತು ಎಪಿಎಂಸಿ ವರ್ತಕರಾದ ಪ್ರತಿ ನಿಧಿ ಹೆಚ್.ಕೆ.ಶಿವಣ್ಣ, ಹರಗನಹಳ್ಳಿ ರಾಜು, ಮಾಜಿ ಕಾರ್ಯದರ್ಶಿಗಳಾದ ಅಣ್ಣಿಗೇರಿ ರಾಮಪ್ಪ, ಸೂರ್ಯನಾರಾಯಣ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.