ದಾವಣಗೆರೆ, ಮಾ.11- ನಗರದ ನೂರಾನಿ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಇದೇ ದಿನಾಂಕ 25 ರಿಂದ 28 ರವರೆಗೆ ನಾಲ್ಕು ದಿನಗಳ ಕಾಲ ಅಖ್ತರ್ ರಜಾ ಸರ್ಕಲ್ ಹತ್ತಿರದ ಮೈದಾನ (ಎಸ್.ಟಿ.ಪಿ ಘಟಕದ ಹತ್ತಿರ)ದಲ್ಲಿ ಅಂತರರಾಜ್ಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಜೆ. ಅಮಾನುಲ್ಲಾ ಖಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ವಿವಿಧ ಜಿಲ್ಲೆಗಳ ತಂಡಗಳು ಭಾಗವಹಿಸಲಿದ್ದು, 30 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಭಾಗವಹಿಸುವ ತಂಡಗಳಿಗೆ ಉಚಿತ ವಸತಿ, ಊಟ ಮತ್ತು ಸಮವಸ್ತ್ರ ವಿತರಿಸಲಾಗುವುದು.
ವಿಜೇತ ತಂಡಗಳಿಗೆ 3,01,100 ನಗದು ಪ್ರಥಮ ಬಹುಮಾನ, 1,51,100 ರೂ. ನಗದು ದ್ವಿತೀಯ ಹಾಗೂ 75,100 ರೂ. ನಗದು ತೃತೀಯ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಪಂದ್ಯಾವಳಿಯ ಉತ್ತಮ ಪಟು, ಉತ್ತಮ ಬ್ಯಾಟ್ಸ್‌ಮನ್, ಉತ್ತಮ ಬೋಲಿಂಗ್‌ಗಳಿಗೆ ವಿಶೇಷವಾಗಿ ಆಕರ್ಷಕ ಬಹುಮಾನ ನೀಡಲಾಗುವುದು ಎಂದರು.
ಹಳೇ ಭಾಗದಲ್ಲೂ ಕ್ರೀಡಾಂಗಣ : 2011 ರಲ್ಲಿ ಪಾಲಿಕೆ ಮಾಲೀಕತ್ವದ 6 ಎಕರೆ ಜಾಗ ಕಾಯ್ದಿರಿಸ ಲಾಗಿದ್ದರೂ, ಕ್ರೀಡಾಂಗಣ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿತ್ತು. 2015 ರಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕ್ರೀಡಾಂಗಣ ನಿರ್ಮಿಸಲು ಒತ್ತಾಯ ಮಾಡಿದ್ದರಿಂದ 10 ಕೋಟಿ ರೂ. ಟೆಂಡರ್ ಕೂಡ ಆಗಿದೆ. ಕಾಮಗಾರಿ ಆರಂಭವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನೂರಾನಿ ಸ್ಪೋರ್ಟ್ಸ್ ಅಕಾಡೆಮಿ ಪದಾಧಿಕಾರಿಗಳಾದ ಬಾಷಾ ಮೊಹಿದ್ದೀನ್, ಇನಾಯತ್ ಅಲಿಖಾನ್, ಅಹಮದ್ ರಜಾ, ಇಮ್ರಾನ್ ರಜಾ ಉಪಸ್ಥಿತರಿದ್ದರು.