ದಾವಣಗೆರೆ, ಮಾ.10- ವಿವಿಧ ಜಾತಿಗಳಿಂದ ಮೀಸಲಾತಿ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತ್ರಿಸದಸ್ಯ ಉನ್ನತ ಮಟ್ಟದ ಸಮಿತಿ ರಚಿಸಿ ಕಾಲಮಿತಿಯಿಲ್ಲದೆ ವರದಿ ಸಲ್ಲಿಕೆ ನಂತರ ಮೀಸಲಾತಿ ಬೇಡಿಕೆಯನ್ನು ಈಡೇರಿಸಲು ತೀರ್ಮಾನಿಸಿದೆ. ವಾಲ್ಮೀಕಿ ನಾಯಕ ಸಮುದಾಯದ ಪರವಾಗಿ ಒತ್ತಾಯಿಸುವುದೇನೆಂದರೆ, ಅನ್ಯ ಸಮುದಾಯಗಳು ಒತ್ತಾಯಿಸುತ್ತಿರುವುದು ವರ್ಗ ಬದಲಾವಣೆಗಾಗಿ. ವಾಲ್ಮೀಕಿ ಸಮುದಾಯ ಒತ್ತಾಯಿಸುತ್ತಿರುವುದು ಮೀಸಲು ಪ್ರಮಾಣ ಹೆಚ್ಚಿಸಲು. ವರ್ಗಗಳ ಬದಲಾವಣೆ ಬಯಸುವ ಸಮುದಾಯಗಳಿಗೆ ಸಮಿತಿ ರಚಿಸಿ ಕ್ರಮ ಕೈಗೊಳ್ಳಲಿ. ಆದರೆ ವಾಲ್ಮೀಕಿ ಸಮಾಜಕ್ಕೆ ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ಯಾವುದೇ ಸಬೂಬು ನೀಡದೆ ಮೀಸಲಾತಿ ನೀಡುವಂತೆ ನಾಯಕ ಸಮಾಜದ ಯುವ ಮುಖಂಡ ಪಿ.ಬಿ. ಅಂಜುಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
January 25, 2025