ವಿಶ್ವಕೋಶಕ್ಕೆ ಮಾಹಿತಿ

ದಾವಣಗೆರೆ, ಮಾ.10- ಕರ್ನಾಟಕ ಯಕ್ಷಗಾನ ಅಕಾಡೆಮಿಯು ಈ ಸಾಲಿನಲ್ಲಿ ಮೂಡಲಪಾಯ ವಿಶ್ವ ಕೋಶವನ್ನು ಹೊರತರಬೇಕೆಂದು ಯೋಜನೆ ಹಮ್ಮಿಕೊಂಡಿದೆ. ಈಗಾಗಲೇ ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭವಾಗಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನ, ಛಾಯಾಚಿತ್ರ, ಬಣ್ಣದ ಚಿತ್ರ, ಹಸ್ತಪ್ರತಿಗಳು, ಛಂದಸ್ಸು, ಕಾವ್ಯದ ಸೌಂದರ್ಯ, ಬಣ್ಣಗಾರಿಕೆ, ಪಾತ್ರಗಳ ವೈಶಿಷ್ಟ್ಯತೆ, ಗೆಜ್ಜೆಪೂಜೆ, ಯಕ್ಷಗಾನ ಕೇಂದ್ರಗಳು, ಭಾಗವತರು, ಕಲಾವಿದರು, ವಾದ್ಯ, ವೇಷ-ಭೂಷಣದ, ಮೂಡಲಪಾಯದ ತಾಳ, ಹೆಜ್ಜೆ ಗುರುತುಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಹೆಚ್ಚಿನ ವಿವರಗಳು ತಮಗೆ ತಿಳಿದಿದ್ದಲ್ಲಿ ಅಕಾಡೆಮಿಯ ಇ-ಮೇಲ್ ಅಥವಾ ಅಂಚೆ, ಕೊರಿಯರ್ ಮೂಲಕ ಮಾಹಿತಿ ಕಳುಹಿಸಲು ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ತಿಳಿಸಿದ್ದಾರೆ.

error: Content is protected !!