ಹೊನ್ನಾಳಿ, ಮೇ 7- ಜನತೆ ಇತ್ತೀಚಿಗೆ ಎದುರಿಸುತ್ತಿರುವ ಕೋವಿಡ್ ಸಮಸ್ಯೆ ಮನಗಂಡ ಧರ್ಮಸ್ಥಳ ಶ್ರೀಕ್ಷೇತ್ರವು ಬಡ ಕೋವಿಡ್ ಸೋಂಕಿತರು ಹಾಗೂ ಕೋವಿಡ್ ಶಂಕಿತರು ಆಸ್ಪತ್ರೆಗೆ ಉಚಿತವಾಗಿ ಹೋಗಿ ಬರಲು ಅನುಕೂಲವಾಗುವಂತೆ ಎರಡು ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಧರ್ಮಸ್ಥಳ ಸಂಸ್ಥೆಯ ಯೋಜ ನಾಧಿಕಾರಿ ಬಸವರಾಜ್ ಅಂಗಡಿ ತಿಳಿಸಿದ್ದಾರೆ.
ತಿಮ್ಲಾಪುರದಿಂದ ಕೋವಿಡ್ ಶಂಕಿತ ವ್ಯಕ್ತಿಯನ್ನು ಬುಧವಾರದಂದು ಹೊನ್ನಾಳಿ ಆಸ್ಪತ್ರೆಗೆ ತಪಾಸಣೆಗೆ ಬಂದು ಬಿಡಲಾಗಿದೆ ಎಂದರು.
ಬಡಜ ನತೆಯು ವಾಹನದ ಸೌಲಭ್ಯ ಕ್ಕಾಗಿ ಮೊ.ನಂ. 70901 29365 ಕ್ಕೆ ಸಂಪರ್ಕಿಸಬಹುದಾಗಿದೆ ಎಂದರು. ಡಾ. ವೀರೆಂದ್ರ ಹೆಗ್ಗಡೆಯವರ ಮಾರ್ಗದರ್ಶ ನದಲ್ಲಿ ಎರಡು ವಾಹನಗ ಳನ್ನು ಪಡೆದು ಮಂಗಳವಾರದಿಂದ ಈ ಸೌಲಭ್ಯ ಕಲ್ಪಿಸಲಾಗಿದೆ.