ಪಿಯು ಪರೀಕ್ಷೆ : ಮಾಗನೂರು ಬಸಪ್ಪ ಕಾಲೇಜಿನ ಸಾಧನೆ

ಪಿಯು ಪರೀಕ್ಷೆ : ಮಾಗನೂರು ಬಸಪ್ಪ ಕಾಲೇಜಿನ ಸಾಧನೆ - Janathavaniದಾವಣಗೆರೆ, ಜು.24 – 2020-21ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಗರದ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ  ವಿದ್ಯಾರ್ಥಿಗಳು ಎಸ್‌.ಎಸ್.ಎಲ್‌.ಸಿ ಮತ್ತು ಪ್ರಥಮ ಪಿಯುಸಿ ಆಧಾರದ ಮೇಲೆ  ಉತ್ತಮ ಅಂಕ ಪಡೆದು 100 ಕ್ಕೆ 100 ಫಲಿತಾಂಶ ಲಭಿಸಿದೆ.

2020-21ನೇ ಸಾಲಿನಲ್ಲಿ 120 ವಿದ್ಯಾ ರ್ಥಿಗಳು ದ್ವಿತೀಯ ಪಿಯುಸಿಗೆ ದಾಖಲಾಗಿದ್ದು 53 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 63 ವಿದ್ಯಾರ್ಥಿ ಗಳು ಫಸ್ಟ್‍ಕ್ಲಾಸ್ ಫಲಿತಾಂಶವನ್ನು ಪಡೆದಿರು ತ್ತಾರೆ. ವಿವಿಧ ವಿಷಯಗಳಲ್ಲಿ 56 ವಿದ್ಯಾರ್ಥಿಗಳು 100 ಕ್ಕೆ 100 ಅಂಕವನ್ನು ಪಡೆದಿರುತ್ತಾರೆ.

ಹೆಚ್.ವೈ. ಶ್ರೀಲಕ್ಷ್ಮಿ (ಶೇ. 100), ಮಮತ ಸಿ.ಹೆಚ್. (ಶೇ. 99.17), ಮೇಘ ಬಿ. (ಶೇ. 99.17), ಇ.ಎನ್. ಭೂಮಿಕ  (ಶೇ. 99), ಪ್ರಕೃತಿ ಜಿ.ಪಿ. (ಶೇ. 99), ಪಿ. ಮನೋಹರಿ (ಶೇ. 98.83), ಎಂ. ಚಂದನ ತಾಳ್ಯ (ಶೇ. 98.67), ಚಂದನ ಪಿ.ಹೆಚ್. (ಶೇ. 98.33), ಎಂ.ಎಸ್. ತಿಪ್ಪೇಸ್ವಾಮಿ (ಶೇ. 98) ಅಂಕ ಪಡೆದಿರುತ್ತಾರೆ. ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಸಂಗಮೇಶ್ವರ ಗೌಡರು, ನಿರ್ದೇಶಕ ಡಾ. ಜಿ.ಎನ್.ಹೆಚ್. ಕುಮಾರ್, ಪ್ರಾಂಶುಪಾಲ ಪ್ರಸಾದ್ ಬಂಗೇರ ಎಸ್.  ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!