ದಾವಣಗೆರೆ, ಮಾ.9- ನಗರದಲ್ಲಿ ಬೆಸ್ಕಾಂ ಸಿಬ್ಬಂದಿ ಎಂದು ಹೇಳಿಕೊಂಡು ವಿದ್ಯುತ್ ಬಿಲ್ ಪಾವತಿಸುವುದಾಗಿ ಹಣ ಪಡೆದು, ಪಾವತಿಸದೇ ವಂಚನೆ ಮಾಡಿರುವ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿವೆ.
ವಿದ್ಯುತ್ ಬಿಲ್ ಅನ್ನು ಬೆಸ್ಕಾಂ ಅಧಿಕೃತ ಕೌಂಟರ್‌ಗಳಲ್ಲಿಯೇ ಪಾವತಿಸಬೇಕು. ಬೆಸ್ಕಾಂ ನಿಂದ ಕೆಲಸ ನಿರ್ವಹಣೆಗಾಗಿ ಸಿಬ್ಬಂದಿ ತಮ್ಮ ಬಳಿ ಬಂದಾಗ ಗುರುತಿನ ಚೀಟಿಯನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಬಿಲ್ಲನ್ನು ಆನ್‌ಲೈನ್‌ನಲ್ಲಿ ಪಾವತಿಸುವುದರ ಮೂಲಕ ಇಂತಹ ವಂಚನೆಗಳನ್ನು ತಪ್ಪಿಸಬಹುದು ಹಾಗೂ ಬೆಸ್ಕಾಂ ಮಿತ್ರ ಆಪ್ ಮುಖಾಂತರ ವಿದ್ಯುತ್ ಬಿಲ್ ಪಾವತಿಸುವುದು ಕ್ಷೇಮಕರ ಎಂದು ಬೆಸ್ಕಾಂ ಜಾಗೃತಿ ಮೂಡಿಸಿದೆ.
ಯಾರಾದರೂ ಅನುಮಾನಾಸ್ಪದವಾಗಿ ವರ್ತಿಸಿದಲ್ಲಿ ಕೂಡಲೇ ಬೆವಿಕಂ ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ: 08192-250210 ಹಾಗೂ ಮೊ: 9483549210 ಸಂಪರ್ಕಿಸಲು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿ. ರಾಮಚಂದ್ರಪ್ಪ ತಿಳಿಸಿದ್ದಾರೆ.