ದಾವಣಗೆರೆ, ಜು.24 -2020-21ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ನಗರದ ಎ.ವಿ.ಕೆ. ಮಹಿಳಾ ಪದವಿ ಪೂರ್ವ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ದೊರೆತಿದೆ.
ಒಟ್ಟು 398 ವಿದ್ಯಾರ್ಥಿನಿಯರಲ್ಲಿ 25 ವಿದ್ಯಾರ್ಥಿನಿಯರು ವಿಶಿಷ್ಟ ದರ್ಜೆ, 274 ಪ್ರಥಮ ಶ್ರೇಣಿ, 94 ದ್ವಿತೀಯ ಶ್ರೇಣಿ ಹಾಗೂ 5 ವಿದ್ಯಾರ್ಥಿನಿಯರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಲಾ ವಿಭಾಗದ ಕು. ಸುದೀಕ್ಷಾ ಶೇ. 99, ವಾಣಿಜ್ಯ ವಿಭಾಗದ ಕು. ಖುಷಿ ಕೊಠಾರಿ ಶೇ. 97 ಹಾಗೂ ವಿಜ್ಞಾನ ವಿಭಾಗದ ಕು. ಸಂಗೀತಾ ಬಿ. ಶೇ. 93ರಷ್ಟು ಅಂಕ ಪಡೆದಿದ್ದಾರೆ.
ಕಾಲೇಜಿಗೆ ಕೀರ್ತಿತಂದ ವಿದ್ಯಾರ್ಥಿನಿಯರನ್ನು ಬಾಪೂಜಿ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ. ಶಾಮನೂರು ಶಿವಶಂಕರಪ್ಪ, ಜಂಟಿ ಕಾರ್ಯದರ್ಶಿಗಳಾದ ಎಸ್.ಎಸ್. ಮಲ್ಲಿಕಾರ್ಜುನ, ಆಡಳಿತ ಮಂ ಡಳಿಯ ಸದಸ್ಯರು, ಶೈಕ್ಷಣಿಕ ನಿರ್ದೇಶಕರು, ಕಾಲೇಜಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದಿಸಿದ್ದಾರೆ.