ಹೊನ್ನಾಳಿ, ಮೇ 7- ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹೊನ್ನಾಳಿ ಶಾಖೆಯಿಂದ ಪ್ರತಿನಿತ್ಯ ಆನ್‌ಲೈನ್‌ನಲ್ಲಿ ಟೆಲಿಗ್ರಾಂ ಮೂಲಕ ಜ್ಞಾನಾಮೃತಧಾರೆ ಎಂಬ ಗ್ರೂಪ್‌ನಲ್ಲಿ ದಿನದ ಮೂರು ಬೇರೆ ಬೇರೆ ಸಮಯದಲ್ಲಿ ರಾಜಯೋಗ (ಧ್ಯಾನ) ಹಾಗೂ ಅಧ್ಯಾತ್ಮಿಕ ಮೌಲ್ಯ ತರಗತಿಗಳನ್ನು ನಡೆಸಲಾಗುತ್ತಿದೆ.
ಕೊರೊನಾ ಎಂಬ ಸೂಕ್ಷ್ಮಾಣು ಸಾಕಷ್ಟು ಹಾನಿಯುಂಟು ಮಾಡುತ್ತಿದ್ದು. ಇದನ್ನು ಗಮನಿಸಿ, ಈ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು ಬೆಳಿಗ್ಗೆ 4 ರಿಂದ 5 ಗಂಟೆಯವರೆಗೆ ಬ್ರಾಹ್ಮೀ ಮುಹೂರ್ತದಲ್ಲಿ (ಅಮೃತ ವೇಳೆ) ಧ್ಯಾನದ ಮೂಲಕ ಸ್ವಯಂನ ಮಾನಸಿಕ, ಅಧ್ಯಾತ್ಮಿಕ ಶಕ್ತಿಗಳನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಸಂಸ್ಥೆಯ ಸಂಚಾಲಕರಾದ ಬ್ರಹ್ಮಾಕುಮಾರಿ ಜ್ಯೋತಿ ತಿಳಿಸಿದ್ದಾರೆ.
ಇದೇ ದಿನಾಂಕ 10 ರಿಂದ 16 ರವರೆಗೆ ಮಧ್ಯಾಹ್ನ 3 ರಿಂದ 4 ರವರೆಗೆ ರಾಜಯೋಗ ಶಿಬಿರ ಗ್ರೂಪ್ ಮಾಡಲಾಗಿದ್ದು, ಆಸಕ್ತರು ಅದರ ಲಿಂಕ್ https:t.me/jion chat/OLWH8FNL57RJYTII ಅಥವಾ ನಿಮ್ಮ ಮೊಬೈಲ್‌ನಲ್ಲಿ ಟೆಲಿಗ್ರಾಂ ಡೌನ್‌ಲೋಡ್ ಮಾಡಿಕೊಂಡು ಹಾಗೂ ಹೆಸರನ್ನು 9945457157ಗೆ ವಾಟ್ಸಾಪ್‌ನಲ್ಲಿ ನೋಂದಾಯಿಸಲು ಕೋರಿದ್ದಾರೆ.