ದಾವಣಗೆರೆ, ಮೇ 7 – ಶುಕ್ರವಾರದಂದು ಜಿಲ್ಲೆಯ 538 ಜನರಲ್ಲಿ ಕೊರೊನಾ ಸೋಂಕಿರುವುದು ಕಂಡು ಬಂದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಇದೇ ದಿನ 258 ಜನರು ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಸಕ್ತ ಸಕ್ರಿಯ ಸೋಂಕಿತರ ಸಂಖ್ಯೆ 3,208 ಆಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 351, ಹರಿಹರದಲ್ಲಿ 48, ಜಗಳೂರಿನಲ್ಲಿ 30, ಚನ್ನಗಿರಿಯಲ್ಲಿ 44, ಹೊನ್ನಾಳಿಯಲ್ಲಿ 42 ಹಾಗೂ ಹೊರ ಜಿಲ್ಲೆಗಳ 23 ಸೋಂಕಿತರು ಪತ್ತೆಯಾಗಿದ್ದಾರೆ. ಕೊರೊನಾದಿಂದ ನಗರದ ಶಿವಕುಮಾರಸ್ವಾಮಿ ಬಡಾವಣೆಯ 30 ವರ್ಷದ ಪುರುಷ ಹಾಗೂ ಕಾಳಿಕಾದೇವಿ ರಸ್ತೆಯ 63 ವರ್ಷದ ಪುರುಷ ಸಾವನ್ನಪ್ಪಿದ್ದಾರೆ.