ದಾವಣಗೆರೆ, ಜು.22- ನ್ಯಾಮತಿ ಪಟ್ಟಣದ ಕುಂಬಾರ ಬೀದಿ ಮತ್ತು ಆಂಜನೇಯ ದೇವಸ್ಥಾನ ಬೀದಿಯವರೆಗೆ 1.17 ಕಿ.ಮೀ. ರಸ್ತೆ ಅಭಿವೃದ್ಧಿ, ಹೊನ್ನಾಳಿ, ನ್ಯಾಮತಿ ಪಟ್ಟಣಗಳು ಮತ್ತು ಸುರಹೊನ್ನೆ ಗ್ರಾಮಗಳ ಪರಿಮಿತಿಯಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳು ಹಾಗೂ ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯ ರಾಜ್ಯ ಹೆದ್ದಾರಿ-48, ರಾಜ್ಯ ಹೆದ್ದಾರಿ-26 ರ ಮುಖ್ಯ ಹೆದ್ದಾರಿ-26 ರ ಮುಖ್ಯ ರಸ್ತೆಗಳ ಮೀಡಿಯನ್ನಲ್ಲಿ ನ್ಯೂಜೆರ್ಸಿ ಕ್ರ್ಯಾಷ್ ಬ್ಯಾರಿಯರ್ಗಳನ್ನು ಅಳವಡಿಸುವ ಕಾಮಗಾರಿಗಳಿಗೆ 25 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಮೊತ್ತದ ಕಾಮಗಾರಿಗೆ ಜು. 22 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿಗಳು ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತಿಳಿಸಿದ್ದಾರೆ.
January 15, 2025