ದಾವಣಗೆರೆ, ಜು.22- ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ಕರೆದಿರುವ ಪ್ಯಾಕೇಜ್ ಟೆಂಡರ್ ರದ್ದುಪಡಿಸುವಂತೆ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್. ಸಿದ್ಧರಾಮಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಯಾಕೇಜ್ ಟೆಂಡರ್ ಕರೆಯುವುದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಬ್ಲಾಕ್ ಮನಿ ಇರುವರಿಗೆ, ಬಂಡವಾಳಶಾಹಿಗಳಿಗೆ ಮಾತ್ರ ಅನುಕೂಲ ಮಾಡಿಕೆೋಟ್ಟಂತಾಗುತ್ತದೆ. ಸ್ಥಳೀಯ ಗುತ್ತಿಗೆದಾರರಿಗೆ ಯಾವುದೇ ಕಾಮಗಾರಿಗಳು ಸಿಗುವುದಿಲ್ಲ ಎಂದರು.
50 ಲಕ್ಷ ರೂ.ಗಳವರೆಗೆ ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ಕೆೋಡಬೇಕೆಂಬ ರಾಜ್ಯ ಸರ್ಕಾರದ ಆದೇಶವಿದೆ. ಇದನ್ನು ತಪ್ಪಿಸುವ ಸಲುವಾಗಿ 6 ರಿಂದ 9 ಕೋಟಿ ರೂ. ಪ್ಯಾಕೇಜ್ ಟ ೆಂಡರ್ ಕರೆದಿದ್ದಾರೆ. ಇದು ಅವೈಜ್ಞಾನಿಕವಾಗಿದ್ದು, ಉದಾಹರಣೆಗೆ ಪ್ಯಾಕೇಜ್ 3 ರಲ್ಲಿ 6 ವಾರ್ಡ್ ಗಳನ್ನು ಸೇರಿಸಿ ಒಟ್ಟು 12 ಸಣ್ಣಪುಟ್ಟ ಕಾಮಗಾರಿಗಳಿಗೆ ಟೆಂಡರ್ ಕರೆದಿರುತ್ತಾರೆ. ಈ ಪ್ಯಾಕೇಜ್ ನಲ್ಲಿ 50 ಲಕ್ಷದೆೋಳಗಿನ ಮೊತ್ತಕ್ಕೆ ಟೆಂಡರ್ ಕರೆದಿದ್ದರೆ, ಸ್ಥಳೀಯ 15 ರಿಂದ 20 ಗುತ್ತಿಗೆದಾರರಿಗೆ ಕಾಮಗಾರಿಗಳು ಸಿಗುತ್ತಿದ್ದವು. ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೆೋಳಿಸಲು ಸಾಧ್ಯವಾಗುತ್ತಿತ್ತು ಎಂದು ಮಾಹಿತಿ ನೀಡಿದರು.
ಜನಪ್ರತಿನಿಧಿಗಳು ಸ್ಥಳೀಯ ಗುತ್ತಿಗೆದಾರರ ಬಗ್ಗೆ ಗಮನ ಹರಿಸಬೇಕು. ದೆೋಡ್ಡ ದೆೋಡ್ಡ ಮೊತ್ತದ ಪ್ಯಾಕೇಜ್ ಗಳನ್ನು ರದ್ದುಗೆೋಳಿಸಿ, ಸಣ್ಣ ಮೊತ್ತದ ಅಂದರೆ 10 ರಿಂದ 50 ಲಕ್ಷದವರೆಗಿನ ಕಾಮಗಾರಿ ಗಳಿಗೆ ಟೆಂಡರ್ ಕರೆಯುವಂತೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ವಿ. ಶ್ರೀನಿವಾಸ್, ಎಸ್.ಹೆಚ್. ಶಿವಣ್ಣ, ಕೆ. ಶಿವಕುಮಾರ್, ಡಿ.ಎನ್. ಚಂದ್ರಶೇಖರ್, ಹೆಚ್. ಷಣ್ಮುಖಪ್ಪ, ಡಿ. ಬಸವರಾಜಪ್ಪ, ಬಿ. ರಮೇಶ್, ಈ. ರುದ್ರೇಶ್, ಡಿ. ಈಶ್ವರ್, ಜಯ್ಯಣ್ಣ, ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.