8ರಂದು ಮೈಸೂರು-ದಾನಪುರ್ ಬೇಸಿಗೆ ವಿಶೇಷ ರೈಲು

ದಾವಣಗೆರೆ, ಮೇ 4- ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ವತಿಯಿಂದ ಇದೇ ದಿನಾಂಕ 8 ರಂದು ಮೈಸೂರು-ದಾನಪುರ್ ಬೇಸಿಗೆ ವಿಶೇಷ ರೈಲನ್ನು (ಒಂದು ಟ್ರಿಪ್ ) ಓಡಿಸಲು ಕ್ರಮ ಕೈಗೊಂಡಿದ್ದು, ರೈಲು ಸಂಖ್ಯೆ 06216 ಮೈಸೂರಿನಿಂದ ಬೆಳಿಗ್ಗೆ 11 ಗಂಟೆಗೆ ಬಿಟ್ಟು, ಬೆಂಗಳೂರು ಕೆಎಸ್‍ಆರ್ ನಿಲ್ದಾಣದಿಂದ 13.25 ಗಂಟೆಗೆ ಆಗಮಿಸಲಿದೆ. ನಂತರ ಯಶವಂತಪುರ-14.00, ತುಮಕೂರು-14.52, ಅರಸೀಕೆರೆ-16.40, ಬೀರೂರು-17.35, ಚಿಕ್ಕಜಾಜೂರು-19.00, ದಾವಣಗೆರೆ-20.00, ಕೊಟ್ಟೂರು-21.50, ಹೊಸಪೇಟೆ-00.55, ತೋರಣಗಲ್ಲು-01.30, ಬಳ್ಳಾರಿ-02.20, ಗುಂತಕಲ್-03.20, ಮಾರ್ಗವಾಗಿ ದ್ರೋಣಾಚಲಂ, ನಂದ್ಯಾಲ, ನರಸರಾವ್‍ಪೇಟ್, ಗುಂಟೂರು, ವಿಜಯವಾಡ, ರಾಜಮಂಡ್ರಿ, ವಿಶಾಖಪಟ್ಟಣಂ, ಖುದ್ರಾ ರೋಡ್, ಭದ್ರಕ್, ಆದ್ರ, ಅಸನಸೋಲ್, ಮಧುಪುರ್ ಮಾರ್ಗವಾಗಿ ಬಿಹಾರ ರಾಜ್ಯದ ದಾನಪುರ್ ಕ್ಕೆ ಮರುದಿನ 20.45 ಕ್ಕೆ ತಲುಪಲಿದೆ.

ಈ ರೈಲು 20 ಬೋಗಿಗಳನ್ನು ಹೊಂದಿದ್ದು 14-ದ್ವಿತೀಯ ದರ್ಜೆ ಸ್ಲೀಪರ್, 04-ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 02 ಲಗೇಜ್ ಬೋಗಿಗಳನ್ನು ಹೊಂದಿರುತ್ತದೆ.  ಈ ರೈಲಿನ ಎಲ್ಲ ಸೀಟುಗಳನ್ನು ಕಾಯ್ದಿರಿಸಿದ ಸೇವೆಗೆ ಮಾತ್ರ ಒದಗಿಸಲಾಗುವುದು.  ಸಾರ್ವಜನಿಕರು ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

error: Content is protected !!