ದಾವಣಗೆರೆ, ಜು.22- ನಗರದ ಭದ್ರಾ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿ 4, ಪ್ರಥಮ ಸ್ಥಾನ 34, ದ್ವಿತೀಯ ಸ್ಥಾನದಲ್ಲಿ 10 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಉನ್ನತ ಶ್ರೇಣಿ 4, ಪ್ರಥಮ ಸ್ಥಾನ 24, ದ್ವಿತೀಯ ಸ್ಥಾನದಲ್ಲಿ 14, ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಆದಿತ್ಯಾ ವಿ.ಬಿ 552 ಹಾಗೂ ವಾಣಿಜ್ಯ ವಿಭಾಗದಲ್ಲಿ ದಾಕ್ಷಾಯಿಣಿ ಜಿ.ಕೆ 540 ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.