ಪಿಯು ಪರಿಕ್ಷೆಯಲ್ಲಿ ಸೈನ್ಸ್‍ ಅಕಾಡೆಮಿ ಸಾಧನೆ

ಪಿಯು ಪರಿಕ್ಷೆಯಲ್ಲಿ ಸೈನ್ಸ್‍ ಅಕಾಡೆಮಿ ಸಾಧನೆ - Janathavaniದಾವಣಗೆರೆ, ಜು.22 – 2020-21ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಗರದ ಸೈನ್ಸ್‌ ಅಕಾಡೆಮಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎಸ್‌.ಎಸ್.ಎಲ್‌.ಸಿ ಮತ್ತು ಪ್ರಥಮ ಪಿಯುಸಿ ಆಧಾರದ ಮೇಲೆ  ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಕು.ಸುಚಿತ ಜಿ.ಇ. 600 ಅಂಕಗಳಿಗೆ 600 ಅಂಕ ಪಡೆದು ಶೇ. 100 ರಷ್ಟು ಫಲಿತಾಂಶ ಪಡೆದಿದ್ದಾಳೆ, ಕು.ಚೈತ್ರ ಜೆ.ಎಸ್‍.ಹಾಗೂ ಕು. ಅಬ್ದುಲ್‍ ಖಾದರ್ ಜಿಲಾನಿ 599/600 ಶೇ (99.86 ), ಕು.ಶಶಾಂಕ್‍ ಕೆ.ಎಸ್ 567/600 (99.50%), ಕು. ಬಿಸ್ವಾಸ್‍ ಪಾಂಡೆ 596/600 ಕು. ನಂದೀಶ್‍ ಸಿ 594/600 (99.00%) ರಷ್ಟು ಅಂಕ ಪಡೆದು ಸಾಧನೆ  ಮಾಡಿರುತ್ತಾರೆ. ಒಟ್ಟಾರೆ ಕಾಲೇಜಿನಿಂದ 214 ವಿದ್ಯಾರ್ಥಿ ಗಳಲ್ಲಿ 96 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 114 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ವೈ.ವಿ. ವಿನಯ್‍, ಅಧ್ಯಕ್ಷ ಎ.ಹೆಚ್. ಶಶಿಕಿರಣ್‌, ಉಪಾಧ್ಯಕ್ಷ ರಘು ಕೆ., ಸಂಸ್ಥೆ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ.ವೀರೇಶ್‍, ಕಾಲೇಜಿನ ಪ್ರಾಂಶುಪಾಲ ಜಿ. ವಿರೂಪಾಕ್ಷಪ್ಪ ಅಭಿನಂದಿಸಿದ್ದಾರೆ.

error: Content is protected !!