ದಾವಣಗೆರೆ, ಮೇ 3 – ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಈಚೆಗೆ ನಡೆಸಿದ ಕರ್ನಾಟಕದ ಪರೀಕ್ಷೆಯಲ್ಲಿ ನಗರದ ಜ.ಜ.ಮು ವೈದ್ಯಕೀಯ ಮಹಾವಿದ್ಯಾಲಯವು ದಾಖಲೆಯ ಫಲಿತಾಂಶ ಪಡೆದಿದೆ. ತನ್ನ 55 ವರ್ಷಗಳ ಇತಿಹಾಸದಲ್ಲೇ ಅತಿ ಹೆಚ್ಚು ಶೇಕಡ ತೇರ್ಗಡೆಯ ದಾಖಲೆ ಬರೆದಿದೆ.
ಪರೀಕ್ಷೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು, ದ್ವಿತೀಯ ವರ್ಷದಲ್ಲಿ 30 ವಿದ್ಯಾರ್ಥಿಗಳು, ತೃತೀಯ ವರ್ಷದಲ್ಲಿ 16 ವಿದ್ಯಾರ್ಥಿಗಳು ಹಾಗೂ ಅಂತಿಮ ವರ್ಷದಲ್ಲಿ 9 ವಿದ್ಯಾರ್ಥಿಗಳು ಶ್ರೇಷ್ಠ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಒಟ್ಟಾರೆ 246 ವಿದ್ಯಾರ್ಥಿಗಳು ಅಂತಿಮ ಎಂಬಿಬಿಎಸ್‌ನ ಪರೀಕ್ಷೆ ತೆಗೆದುಕೊಂಡಿದ್ದು, ಅದರಲ್ಲಿ 232 ವಿದ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ತೇರ್ಗಡೆಯಾಗುವುದರೊಂದಿಗೆ ಒಟ್ಟಾರೆ 94% ಸಾಧಿಸಿದ್ದಾರೆ. ಇದರಲ್ಲಿ ಅತಿ ಹೆಚ್ಚು ಡಿಸ್ಟಿಂಕ್ಷನ್ 9, 175 ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವುದು ಗಮನಾರ್ಹ.
ಫಲಿತಾಂಶದ ಬಗ್ಗೆ ಕಾಲೇಜಿನ ಛೇರ್ಮನ್ ಹಾಗೂ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರು ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತಾ, ಈ ಫಲಿತಾಂಶ ನಮ್ಮ ಜ.ಜ.ಮು ವೈದ್ಯಕೀಯ ಕಾಲೇಜಿನಲ್ಲಿ ಕೊಡುವ ಉತ್ತಮ ಹಾಗೂ ಶ್ರೇಷ್ಟ ಮಟ್ಟದ ಬೋಧನೆ, ಉತ್ತಮ ಸೌಲಭ್ಯ ಮತ್ತು ಸಿಗುತ್ತಿರುವ ಅವಕಾಶಗಳೇ ಕಾರಣ. ಎಲ್ಲಾ ತೇರ್ಗಡೆಯಾಗಿ ಡಾಕ್ಟರ್ ಪದವಿ ಪಡೆದ ವಿದ್ಯಾರ್ಥಿಗಳು ನಿಷ್ಟೆಯಿಂದ ಸೇವೆ ಮಾಡಿ, ಒಳ್ಳೆಯ ಹೆಸರನ್ನು ಪಡೆಯುವಂತೆ ಶುಭ ಹಾರೈಸಿದ್ದಾರೆ.
ಬಾಪೂಜಿ ಆಸ್ಪತ್ರೆಯ ಛೇರ್ಮನ್ ಹಾಗೂ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು, ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಹೇಳುತ್ತಾ, ಈ ಒಂದು ವಿಷಮ ಸ್ಥಿತಿಯಲ್ಲಿ ಇಂತಹ ಒಳ್ಳೆಯ ಫಲಿತಾಂಶವನ್ನು ತಂದದ್ದು ತುಂಬಾ ಸಂತೋಷವಾದ ವಿಷಯ. ಈ ಒಂದು ಮಹಾಮಾರಿಯನ್ನು ಹೊಡೆದೊಡಿಸಲು ನಿಮ್ಮ ಕರ್ತವ್ಯ ಹೆಚ್ಚಿನ ಆದ್ಯತೆ ವಹಿಸಲಿ ಎಂದು ಕರೆ ನೀಡಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ಡಾ|| ಎಸ್.ಬಿ.ಮುರುಗೇಶ್ ಅವರು, ವಿದ್ಯಾರ್ಥಿಗಳಿಗೆ ಸಿಹಿ ಹಂಚಿ, ವೈದ್ಯಕೀಯ ವಿಭಾಗದಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಏರಿ ಹೆಚ್ಚಿನ ಸಂಶೋಧನೆ ನಡೆಸಿ, ಯಾವುದೇ ರೋಗ ಬಂದರೂ ಅದನ್ನು ಬಡಿದೊಡಿಸಲು ಸದಾ ಸಿದ್ಧರಾಗಿರಿ, ನಿಮ್ಮ ವೃತ್ತಿಗೆ ನ್ಯಾಯ ಹಾಗೂ ವೃತ್ತಿಯ ಗೌರವ ಕಾಪಾಡುವಂತೆ ಆಶಯ ವ್ಯಕ್ತಪಡಿಸಿದ್ದಾರೆ.
ಫಲಿತಾಂಶದ ವಿವರ : ಡಾ|| ಎಸ್.ಪಿ.ಶ್ರೇಯ (ಡಾ|| ಎಸ್.ಎಸ್.ಪ್ರಕಾಶ್ ಹಾಗೂ ಡಾ|| ಜಿ.ವಿ.ಕವಿತಾ ಅವರ ಪುತ್ರಿ) 1390 ಅಂಕ ಪಡೆದು, (ಶೇ.79.43) ಕಾಲೇಜಿಗೆ ಪ್ರಥಮ ಸ್ಥಾನ.
ಡಾ|| ಎಸ್.ಎನ್.ಅನುಷ (ಡಾ|| ಎ.ಆರ್.ಹನುಮಂತಪ್ಪ ಹಾಗೂ ಶ್ರೀಮತಿ ಜಿ.ಸಿ.ಸುಧಾ ಅವರ ಪುತ್ರಿ) 1374 (ಶೇ. 78.51).
ಡಾ|| ಆರ್.ಅನುಶಾ ದೇವಿ (ಕೆ.ಎಸ್.ರಾಮಕೃಷ್ಣ ಗೌಡ ಹಾಗೂ ಶ್ರೀಮತಿ ವೀಣಾ ಗೌಡ ಅವರ ಪುತ್ರಿ) 1373 (ಶೇ.78.46)
ಡಾ|| ಹೆಚ್.ಎಸ್.ಅರ್ಪಿತ (ಡಾ|| ಡಬ್ಲ್ಯೂ.ಬಿ.ಶಿವಕುಮಾರ್ ಹಾಗೂ ಶ್ರೀಮತಿ ಬಿ.ಕೆ.ಭಾರತಿ ಅವರ ಪುತ್ರಿ) 1351 (ಶೇ.77.20)
ಡಾ|| ಮಿನರ್ವಾ ಪಿ.ಭದ್ದೂರ್‍ಘಟ್ಟೆ (ಬಿ.ಸಿ.ರವಿ ಹಾಗೂ ಶ್ರೀಮತಿ ಬಿ.ಆರ್.ಸುನಿತಾ ಅವರ ಪುತ್ರಿ) 1340 (ಶೇ.76.57)
ಡಾ|| ಸಮರ್ನ್ ಕಾಸಿರೆಡ್ಡಿ, 1335 (ಶೇ.76.29)
ಡಾ|| ಸಂಜಯ್ ಆರ್.ಅಲಿಗರ್, 1331 (ಶೇ.76.06)
ಡಾ|| ಬಿ. ಅಮಿತ್, 1316 (ಶೇ.75.20)
ಡಾ|| ಎಸ್.ಮೌನಾ, 1313 (ಶೇ.75.03)