ಹೊನ್ನಾಳಿ, ಮೇ 3- ತಾಲ್ಲೂಕಿಗೆ ಬೆಂಗಳೂರು ಹಾಗೂ ಇತರೆಡೆಗಳಿಂದ ಈವರೆಗೆ ಆಗಮಿಸಿದವರ ಸಂಖ್ಯೆ 406 ಜನರು. ಅದರಲ್ಲಿ 378 ಜನ ಬೆಂಗಳೂರಿನಿಂದ ಬಂದವರಾಗಿದ್ದು, 28 ಜನ ಹೊರರಾಜ್ಯ ಸೇರಿದಂತೆ ಇತರೆಡೆಗಳಿಂದ ಬಂದಿರುವುದಾಗಿ ತಹಶೀಲ್ದಾರ್ ಬಸನಗೌಡ ಕೋಟೂರ್ ಹೇಳಿದರು.
ವಲಸೆ ಬಂದ 406 ಜನರಲ್ಲಿ ಈವರೆಗೆ 239 ಜನರನ್ನು ಆರೋಗ್ಯ ಇಲಾಖೆ ಪರಿಶೀಲನೆ ಮಾಡಿದ್ದು, 6 ಜನರಿಗೆ ಪಾಸಿಟಿವ್ ಬಂದಿದೆ. ಅವರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ 267 ಜನರನ್ನು ತಪಾಸಣೆ ನಡೆಸಲಾಗುತ್ತಿದೆ. ಮಾದನಬಾವಿ ಗ್ರಾಮದಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಹೊನ್ನಾಳಿ ಪಟ್ಟಣದಲ್ಲಿ ತರಕಾರಿ ವ್ಯಾಪಾರ ವಹಿವಾಟು ನಡೆಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಲು ಇಂದು ಸಂಜೆ ಸಭೆ ಕರೆಯಲಾಗಿದೆ ಎಂದರು.