ಜಿಲ್ಲೆಯಲ್ಲಿ ಆರು ಕೊರೊನಾ ಸಾವು

ದಾವಣಗೆರೆ, ಮೇ. 1 – ಜಿಲ್ಲೆಯಲ್ಲಿ ಶನಿವಾರ ಕೋವಿಡ್‌ ಸೋಂಕಿನಿಂದಾಗಿ ಆರು ಜನರು ಮೃತಪಟ್ಟಿದ್ದು, 386 ಜನರಲ್ಲಿ ಸೋಂಕು ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ಎರಡೇ ದಿನಗಳ ಅಂತರದಲ್ಲಿ 12 ಸಾವುಗಳು ಸಂಭವಿಸಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 283, ಪ್ರಸ್ತುತ ಜಿಲ್ಲೆಯಲ್ಲಿ 2097 ಸಕ್ರಿಯ ಪ್ರಕರಣಗಳಿವೆ. 

ದಾವಣಗೆರೆ ತಾಲ್ಲೂಕಿನಲ್ಲಿ ಇಂದು 243, ಹರಿಹರ 53, ಜಗಳೂರು 21, ಚನ್ನಗಿರಿ 29, ಹೊನ್ನಾಳಿ 21 ಹಾಗೂ ಹೊರ ಜಿಲ್ಲೆಯ 19 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಹರಿಹರ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆ

ಮಲೇಬೆನ್ನೂರು, ಮೇ 1- ಪಟ್ಟಣದ 7ನೇ ವಾರ್ಡ್‌ನ ಜಟ್‌ಪಟ್ ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಗಂಟಲು ದ್ರವ ಪರೀಕ್ಷೆ ಮಾಡಲಾಯಿತು.

ಅಲ್ಲದೇ, ಹೊರಗಿನಿಂದ ಪಟ್ಟಣಕ್ಕೆ ಆಗಮಿಸಿರುವವರನ್ನು ಪತ್ತೆ ಮಾಡಿ, ಅವರನ್ನೂ ಟೆಸ್ಟ್ ಮಾಡಿ, ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ದಿನಕರ್ ತಿಳಿಸಿದ್ದಾರೆ.

ಪುರಸಭೆ ಸದಸ್ಯ ಸುಬ್ಬಿ ರಾಜಪ್ಪ, ಪುರಸಭೆ ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್, ಪ್ರಭು ನವೀನ್ ಹಾಗೂ ಆರೋಗ್ಯ ಇಲಾಖೆಯವರು ಈ ವೇಳೆ ಹಾಜರಿದ್ದರು.

ಏರಿಕೆ : ಕಳೆದ 3-4 ದಿನಗಳಿಂದ ಹರಿಹರ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಶುಕ್ರವಾರ 43 ಪಾಸಿಟಿವ್ ಕೇಸ್ ಪತ್ತೆಯಾಗಿದ್ದರೆ, ಶನಿವಾರ 53ಕ್ಕೆ ಏರಿಕೆ ಆಗಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ 214 ಸಕ್ರಿಯ ಕೊರೊನಾ ಕೇಸ್‌ಗಳಿದ್ದು, ಕೋವಿಡ್ -14 ಆರಂಭವಾದಾಗಿನಿಂದ ಇದುವರೆ ಗಿನ ಸೋಂಕಿತರ ಸಂಖ್ಯೆ 3281 ಆಗಿರುತ್ತದೆ. ಇದರಲ್ಲಿ ಪುರುಷರು 1860 ಮತ್ತು ಮಹಿಳೆಯರು 1392 ಇದ್ದಾರೆ. ನಗರದಲ್ಲಿ 1468 ಮತ್ತು ಗ್ರಾಮೀಣ ಪ್ರದೇಶದಲ್ಲಿ 1813 ಜನ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.

error: Content is protected !!