ರಾಯಚೂರು, ಮೇ 2 – ಕೋವಿಡ್ ಎರಡನೇ ಅಲೆ ಹೆಚ್ಚಾಗಿರುವುದರಿಂದ ಹಾಗೂ ಸರ್ಕಾರದ ನಿಯ ಮದ ಪ್ರಕಾರ ಮಂತ್ರಾಲಯ ಕ್ಷೇತ್ರದಲ್ಲಿ ಇಂದಿನಿಂದ ಭಕ್ತರಿಗೆ ಪ್ರತ್ಯಕ್ಷ ದರ್ಶನ, ತೀರ್ಥ, ಪ್ರಸಾದಗಳಿಗೆ ಅವಕಾಶವಿರುವು ದಿಲ್ಲ. ಸ್ಥಳೀಯವಾಗಿ ಲಾಕ್‍ಡೌನ್ ವಿಧಿಸಿರುವುದರಿಂದ ಭಕ್ತರಿಗೆ ಮುಂದಿನ ಸೂಚನೆ ನೀಡುವವರೆಗೂ ಮಂತ್ರಾಲಯಕ್ಕೆ ಬರಲು ಅವಕಾಶವಿಲ್ಲ. ಎಂದಿನಂತೆ ಶ್ರೀ ಮಠದಲ್ಲಿ ಪೂಜಾ ಕೈಂಕರ್ಯಗಳು, ಪಂಚಾಮೃತ, ರಥೋತ್ಸವಾದಿ ಸೇವೆಗಳು ಜರುಗುತ್ತವೆ. ಭಕ್ತರು ಆನ್‌ಲೈನ್ ಮೂಲಕ ಈ ಸೇವೆಗಳಲ್ಲಿ ಪಾಲ್ಗೊಳ್ಳುವಂತೆ ಮಠದ ವ್ಯವಸ್ಥಾಪಕ ವೆಂಕಟೇಶ್ ಜೋಷಿ ತಿಳಿಸಿದ್ದಾರೆ.
January 10, 2025