ದಾವಣಗೆರೆ, ಜು. 21 – ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ನಗರದ ಜ್ಞಾನ ಸಾಗರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಕಾಲೇಜಿನ ಎಸ್.ಬಿ. ರುಚಿತ ರಾಣಿ, ಜಿ.ಕೆ. ಹರ್ಷಿತ, ಎಂ.ಎಲ್. ಚೈತ್ರ, ಹೆಚ್. ಭವಾನಿ, ಬಿ.ಎಂ. ಪವನ್ಕುಮಾರ್, ಎಂ.ಎನ್. ರೇಖಾ, ಎಸ್. ದೀಪ, ಎಂ.ಪಿ. ಲಕ್ಷ್ಮಿ, ಜಿ.ಕೆ. ಪ್ರಮೋದ್ ಇವರುಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ, ಅಲ್ಲದೆ ಶೇ. 90ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಕಾಲೇಜಿನ ಪ್ರಾಂಶುಪಾಲ ಕೆ. ಪ್ರಸನ್ನ ಕುಮಾರ್ ಅಭಿನಂದಿಸಿದ್ದಾರೆ.
February 25, 2025