ರಾಣೇಬೆನ್ನೂರು, ಜು.21- ರೋಟರಿ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 79 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು , 20 ವಿಶಿಷ್ಟ ದರ್ಜೆ, 52 ಪ್ರಥಮ 7 ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನಿಸರ್ಗ ಕುಂದಾಪೂರ ಪ್ರಥಮ, ಕಿರಣ ಕುಂವರ ರಜಪೂತಿ ದ್ವಿತೀಯ, ಸುರೇಖ ಅಗಡಿ ತೃತೀಯ, ವಿಜ್ಞಾನ ವಿಭಾಗದಲ್ಲಿ ಪ್ರಭಾವತಿ ತುಮ್ಮಿನಕಟ್ಟಿ ಪ್ರಥಮ, ಪದ್ಮಾವತಿ ತುಮ್ಮಿನಕಟ್ಟಿ ದ್ವಿತೀಯ, ಸಾಧನಾ ಜಾಡರ ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಕೇಲಗಾರ, ಕಾರ್ಯದರ್ಶಿ ಕೆ.ವಿ.ಶ್ರೀನಿವಾಸ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ.
January 10, 2025