ದಾವಣಗೆರೆ, ಮಾ.3- ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ಬಂಧಿಸುವಂತೆ ಹಲ್ಲೆಗೊಳಗಾದ ಜಿ.ಡಿ. ಮಾಲತೇಶ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ದಿನಾಂಕ 4.03.2020 ರಂದು ನಡೆದ ಕುರಿಕಾಳಗದಲ್ಲಿ ಕುರಿ ಸೋಲು ಕಂಡಿದ್ದನ್ನು ಸಹಿಸಿಕೊಳ್ಳದ ಮಹಾನಗರ ಪಾಲಿಕೆ ಸದಸ್ಯ ಜಿ.ಡಿ. ಪ್ರಕಾಶ್ ಮತ್ತವರ ಕಡೆಯವರು ಏಕಾಏಕಿ ನಮ್ಮ ಮನೆಗೆ ನುಗ್ಗಿ ದಾಂಧಲೆ ಮಾಡಿ, ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಹೀನಾಯವಾಗಿ ನಿಂದಿಸಿದ್ದಾರೆ ಎಂದು ಜಿ.ಡಿ.ಮಾಲತೇಶ್ ದೂರಿದರು.
ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 11 ಜನರ ವಿರುದ್ಧ ಕೇಸು ದಾಖಲಾಗಿದ್ದರೂ ಸಹ 8 ಜನರನ್ನು ಕೈಬಿಟ್ಟು ಪ್ರಶಾಂತ್, ಸುನೀಲ್, ಶ್ರೀಕಾಂತ್ ಇವರನ್ನಷ್ಟೇ ಚಾರ್ಜ್‌ಶೀಟ್‌ನಲ್ಲಿ ಸೇರಿಸಿದ್ದಾರೆ. ಉಳಿದ 8 ಜನರ ವಿರುದ್ಧ ಕೇಸು ದಾಖಲಿಸುವಂತೆ ಒತ್ತಾಯಿಸಿದರು.
ಬಸವನಗರ ಪೊಲೀಸ್ ಠಾಣೆ ಸಿಪಿಐ ಗಜೇಂದ್ರ ಪಾಟೀಲ್ ಅವರು ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಜಿ.ಡಿ. ಮಾಲತೇಶ್ ಆರೋಪಿಸಿದರು.
ಈ ಪ್ರಕರಣದ ಬಗ್ಗೆ ಸರಿಯಾದ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.