ದಾವಣಗೆರೆ, ಮಾ.3- ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರು ಸಹಕರಿ ಸುವಂತೆ ಹಿರಿಯ ಉಪ ನೋಂದಣಾಧಿಕಾರಿ ಗಳಾದ ಎಲ್.ರಾಮಕೃಷ್ಣ, ಜಿ.ಪ್ರಸನ್ನ ಮನವಿ ಮಾಡಿದ್ದಾರೆ. ಸರ್ವರ್ ಸಮಸ್ಯೆಯಿಂದ ತಾತ್ಕಾಲಿಕ ವಾಗಿ ನೋಂದಣಿ ಕಾರ್ಯ ಸ್ಥಗಿತಗೊಂಡಿದೆ. ಆದಷ್ಟು ಶೀಘ್ರ ಸಮಸ್ಯೆ ನಿವಾರಿಸಿ, ಸಾರ್ವಜನಿಕರಿಗೆ ತಿಳಿಸಿದ ನಂತರವೇ ನೋಂದಣಿ ಕಾರ್ಯಕ್ಕೆ ಕಚೇರಿಗೆ ಆಗಮಿಸುವಂತೆ ಅವರು ಹೇಳಿದ್ದಾರೆ. ಪತ್ರ ಬರಹಗಾರರ ಸಂಘದ ಅಧ್ಯಕ್ಷ ಸಂಗಮೇಶ್ ಎಲಿಗಾರ್ ಸಹ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
December 28, 2024