ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.0.93ಕ್ಕೆ ಇಳಿಕೆ

ದಾವಣಗೆರೆ, ಜು.21- ಜಿಲ್ಲೆಯಲ್ಲಿ ಕಳೆದೊಂದು ವಾರದ ಕೊರೊನಾ ಪಾಸಿಟಿವಿಟಿ ದರ ಶೇ.0.93 ಹಾಗೂ ಮರಣ ಪ್ರಮಾಣ ದರ ಶೇ.1.48ಕ್ಕೆ ಇಳಿಕೆಯಾಗಿದೆ.

ಬುಧವಾರ 13 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು,  ಒಬ್ಬರು ಮೃತಪಟ್ಟಿದ್ದಾರೆ. 11 ಜನರು ಗುಣ ಮುಖರಾಗಿದ್ದಾರೆಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 7, ಹರಿಹರ 2, ಜಗಳೂರು 1, ಚನ್ನಗಿರಿ 1, ಹೊನ್ನಾಳಿ 1 ಹಾಗೂ  ಹಾಗೂ ಹೊರ ಜಿಲ್ಲೆಯ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ 346 ಸಕ್ರಿಯ ಪ್ರಕರಣಗಳಿವೆ.

error: Content is protected !!