ಸಂಶೋಧನಾ ಸ್ಥಾನಗಳಿಗೆ ಅರ್ಜಿ ಅವಧಿ ವಿಸ್ತರಣೆ

ದಾವಣಗೆರೆ, ಏ.28- ದಾವಣಗೆರೆ ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ಈ ಸಾಲಿನಲ್ಲಿ ಲಭ್ಯವಿರುವ ಪಿಹೆಚ್‌ಡಿ/ಪಿಡಿಎಫ್/ಡಿಎಸ್ಸಿ/ಡಿಲಿಟ್ ಸಂಶೋಧನಾ ಸ್ಥಾನ ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಏಪ್ರಿಲ್ 27 ರಿಂದ ಮೇ 21 ರವರೆಗೆ ಲಾಕ್‌ಡೌನ್‌ಗೆ ಆದೇಶ ನೀಡಿರುವುದರಿಂದ ಹಾಗೂ ಕುಲಪತಿಗಳ ಅನುಮೋದನೆ ಮೇರೆಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 12 ರವರೆಗೆ ವಿಸ್ತರಿಸಲಾಗಿದೆ.

ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ವಿವಿಯ ವೆಬ್‌ಸೈಟ್ ಅನ್ನು ಸಂಪರ್ಕಿಸಲು ದಾವಣಗೆರೆ ವಿವಿ ಕುಲಸಚಿವರು ತಿಳಿಸಿದ್ದಾರೆ.

error: Content is protected !!