ದಾವಣಗೆರೆ, ಏ.28- ಸರ್ಕಾರದ ಕೋವಿಡ್ ಮಾರ್ಗ ಸೂಚಿಗಳನ್ನು ಕಡ್ಡಾಯ ವಾಗಿ ಪಾಲನೆ ಮಾಡು ವಂತೆ ಸಂಸದ ಜಿ.ಎಂ.ಸಿದ್ದೇಶ್ವರ ಜನತೆ ಯಲ್ಲಿ ಮನವಿ ಮಾಡಿದ್ದಾರೆ. ಅನಾವಶ್ಯಕ ವಾಗಿ ಅಲೆ ದಾಡದೇ ಮನೆಯಲ್ಲೇ ಇರಬೇಕು. ಕಡ್ಡಾ ಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು ಕಡ್ಡಾಯವಾಗಬೇಕು ಎಂದಿದ್ದಾರೆ. ಗ್ರಾಮಗಳಲ್ಲಿ ಹಬ್ಬ, ರಥೋತ್ಸವ, ಜಾತ್ರೆಗಳ ಆಚರಣೆಗಳು ಕಂಡು ಬಂದರೆ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯವರ ವಿರುದ್ಧ ಕ್ರಮ ಜರುಗಿಸುವುದಾಗಿ ಸರ್ಕಾರ ತಿಳಿಸಿದೆ. ಆದ್ದರಿಂದ ಗ್ರಾಮಸ್ಥರು ಯಾವುದೇ ಆಚರಣೆಗೆ ಮುಂದಾಗಬಾರದು ಎಂದು ವಿನಂತಿಸಿದ್ದಾರೆ.
December 26, 2024