13 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕಗಳು
ದಾವಣಗೆರೆ, ಜು.21- 2020-21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ನಗರದ ಶ್ರೀ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.
ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ನಿರ್ಧರಿಸಲ್ಪಟ್ಟ ಫಲಿತಾಂಶದಲ್ಲಿ ಸಿದ್ದಗಂಗಾ ಪಿಯು ಕಾಲೇಜಿನ ಭೂಮಿಕಾ ಎಂ, ಚಂದನ್ ಬಿ.ಪಿ, ಚೇತನ್ ಹೆಚ್.ವಿ, ದಿವ್ಯಶ್ರೀ ಟಿ.ಕೆ, ಗೌರಿ ಜಯಣ್ಣ ಇಟಗಿ, ಅಭಿಲಾಷ್ ಕೆ.ಎಸ್, ಪ್ರೀತಿ ಎನ್.ಎಂ, ರಾಜೇಶ್ವರಿ ಜಿ, ಸಂಜನಾ ಎಂ.ಜಿ, ಪಿ. ವೆಂಕಟದುರ್ಗಪ್ರಸಾದ್, ತನಿಷ ತಾನಾಜಿ ಶಿಂಧೆ ಟಿ, ತೇಜಸ್ವಿನಿ ಜಿ.ಕೆ, ವರುಣ್ ಕುಮಾರ್ ಎ. 600ಕ್ಕೆ 600 ಅಂಕಗಳನ್ನು ಪಡೆದಿದ್ದಾರೆ.
ಕಾಲೇಜಿನಿಂದ ಒಟ್ಟು 544 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯೊಂದಿಗೂ 342 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಎಲ್ಲಾ ವಿದ್ಯಾರ್ಥಿ ಹಾಗೂ ಸಿಬ್ಬಂದಿಯನ್ನು ಕಾಲೇಜಿನ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೋಜ, ಪ್ರಾಚಾರ್ಯ ಡಿ.ಸಿ. ನಿರಂಜನ್, ಕಾಲೇಜಿನ ನಿರ್ದೇಶಕ ಡಾ. ಜಯಂತ್, ಕಾರ್ಯದರ್ಶಿ, ಡಿ.ಎಸ್. ಹೇಮಂತ್, ಅಧ್ಯಕ್ಷ ಡಿ.ಎಸ್. ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.