ಸಿರಿಗೆರೆ ಬೃಹನ್ಮಠದ ಹಿರಿಯ ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 107ನೇ ಜಯಂತಿ ಅಂಗವಾಗಿ ಅಂತರ್ಜಾಲದಲ್ಲಿ ಇಂದು ಬೆಳಿಗ್ಗೆ 10 ರಿಂದ ಸಂವಾದ ನಡೆಯಲಿದೆ.
ಸಾನ್ನಿಧ್ಯವನ್ನು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಸಂವಾದದಲ್ಲಿ ಎಸ್.ಎಸ್. ಸಿದ್ದಪ್ಪ, ಬಿ.ಪಿ. ಓಂಕಾರಪ್ಪ, ಹೆಚ್.ಎಸ್. ದ್ಯಾಮೇಶ್ ಭಾಗವಹಿಸುವರು. ವಚನ ಗೀತೆಯನ್ನು ಹೆಚ್.ಎಸ್. ನಾಗರಾಜ್ ಮತ್ತು ಸಂಗಡಿಗರು ನಡೆಸಿಕೊಡುವರು. ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗಾಗಿ “f LIVE ಶಿವ ಸಂಚಾರ-ಸಾಣೇಹಳ್ಳಿ ಗ್ರೂಪ್” ವೀಕ್ಷಿಸಬಹುದು.
ಪ್ರತಿವರ್ಷ ಏಪ್ರಿಲ್ 28 ರಂದು ಪೂಜ್ಯರ ಜಯಂತಿ ಅಂಗವಾಗಿ ಶ್ರೀ ಶಿವಕುಮಾರ ರಥೋತ್ಸವ ಮತ್ತಿತರೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕೊರೊನಾ 2ನೇ ಅಲೆಯ ಕಾರಣದಿಂದ ರಥೋತ್ಸವವನ್ನು ರದ್ದುಪಡಿಸಲಾಗಿದೆ.