ದಾವಣಗೆರೆ, ಏ.27- ಕೋವಿಡ್-19 ರ ಎರಡನೇಯ ಅಲೆಯ ಪರಿಣಾಮದ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯಲ್ಲಿ ರೈತರು ಬೆಳೆದ ಹಾಗೂ ಕಟಾವಿಗೆ ಬಂದಿರುವ ತರಕಾರಿ, ಹೂ ಮತ್ತು ಹಣ್ಣುಗಳ ಮಾರಾಟಕ್ಕೆ / ಸಾಗಾಣಿಕೆಗೆ ಸೂಕ್ತ ವ್ಯವಸ್ಥೆ ಹಾಗೂ ಸೂಕ್ತ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಯಾವುದೇ ತೊಂದರೆಗಳು ಆಗದಂತೆ ರೈತರಿಗೆ ಮಾರ್ಗದರ್ಶನಕ್ಕಾಗಿ ಹಾಗೂ ರೈತರ ತೋಟಗಾರಿಕೆ ಉತ್ಪನ್ನಗಳ ವಿಲೇವಾರಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಇಲಾಖೆಯಿಂದ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಹೆಲ್ಪ್‍ಲೈನ್ ಸ್ಥಾಪಿಸಲಾಗಿದೆ.
ಜಿಲ್ಲೆಯ ರೈತರು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಕಚೇರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದಾಗಿದೆ.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ), ದಾವಣಗೆರೆ ಸಂಖ್ಯೆ 08192-292091 ಮೊ.ನಂ 9980421756, ಹಿ.ಸ.ತೋ.ನಿ.(ಜಿಪಂ), ಚನ್ನಗಿರಿ 08189-228170 ಮೊ.ನಂ. 8310662972, ಹಿ.ಸ. ತೋ.ನಿ. (ಜಿ.ಪಂ), ಹೊನ್ನಾಳಿ 08189-252990 ಮೊ.ನಂ 95359 98829, ಹಿ.ಸ.ತೋ.ನಿ. (ಜಿ.ಪಂ), ಹರಿಹರ 08192-242803, ಮೊ.ನಂ 9900526059 ಹಿ.ಸ.ತೋ.ನಿ. (ಜಿ.ಪಂ), ಜಗಳೂರು 08196-227389, ಮೊ.ನಂ 7022058656 ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಲಕ್ಷ್ಮೀಕಾಂತ ಬೊಮ್ಮನ್ನಾರ್ ತಿಳಿಸಿದ್ದಾರೆ.