ಹಳೇ ಭಾಗದ ಪ್ರಮುಖ ರಸ್ತೆಗಳಲ್ಲಿ ಭಾರೀ ವಾಹನ ನಿಷೇಧಿಸಲು ಚಿಂತನೆ

ದಾವಣಗೆರೆ, ಜು.19- ಹಳೇ ದಾವಣಗೆರೆ ಭಾಗದ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ ಪ್ರಮುಖ 6 ರಸ್ತೆಗಳಲ್ಲಿ ಭಾರೀ ಸರಕು ವಾಹನಗಳ ಪ್ರವೇಶ ನಿಷೇಧಿತ ರಸ್ತೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷ್ಯಂತ್ ಅವರ ಅಧ್ಯಕ್ಷತೆಯಲ್ಲಿ ನಗರದ ಶ್ರೀ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ಪೂರ್ವಭಾವಿ ಸಭೆ ನಡೆಸಲಾಯಿತು. 

ಸಭೆಯಲ್ಲಿ ಪಾಲ್ಗೊಂಡಿದ್ದ ಈ ಭಾಗಗಳ ವರ್ತಕರು, ಸಾರ್ವಜನಿಕ ಗಣ್ಯರು  ನೀಡಿದ ಸಮಸ್ಯೆ ಹಾಗೂ ಸಲಹೆಗಳನ್ನು ಸ್ವೀಕರಿಸಲಾಯಿತು.  ಹೆಚ್ಚುವರಿ ಎಸ್ಪಿ ರಾಜೀವ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್, ಮಹಾನಗರ ಪಾಲಿಕೆ ಇಂಜಿನಿಯರ್  ಶ್ರೀಮತಿ ನಳಿನಿ, ಡಿವೈಎಸ್ಪಿ ನಾಗೇಶ್ ಐತಾಳ್ ಅವರುಗಳು ಮಾತನಾಡಿದರು. ಲಾರಿ ಅಸೋಸಿ ಯೇಷನ್, ಛೇಂಬರ್ ಆಫ್‌ ಕಾಮರ್ಸ್, ಮಹಾನಗರ ಪಾಲಿಕೆ ಸದಸ್ಯರು, ಹಮಾಲರ ಸಂಘ, ಜ್ಯುಯಲರ್ಸ್ ಅಸೋಸಿಯೇಷನ್, ನಗರದ ನಾಗರಿಕರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!