ದಾವಣಗೆರೆ, ಏ.26- ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಫ್ಯಾನ್ಸಿ ಅಂಗಡಿ ತೆರೆದು, ವ್ಯಾಪಾರ ಮಾಡುತ್ತಿದ್ದ ಆರೋಪದಲ್ಲಿ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಬಳಿ ರೂಪಕಲಾ ಫ್ಯಾನ್ಸಿ ಸ್ಟೋರ್ ಬಗ್ಗೆ ವಿರುದ್ಧ ಪೊಲೀಸ್ ಠಾಣೆಯ ಹರೀಶ್, ಸೈಯದ್ ಅಲಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಸ್‌ಐ ಬಿ.ಎಸ್. ಅರವಿಂದ್ ಪ್ರಕರಣ ದಾಖಲಿಸಿದ್ದಾರೆ.