ನಗರದಲ್ಲಿ ಇಂದು, ನಾಳೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ದಾವಣಗೆರೆ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು, ನಾಳೆ ವಿದ್ಯಾನಗರ ರಸ್ತೆಯಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ.

ಇಂದು ಬೆಳಿಗ್ಗೆ 8.30 ಕ್ಕೆ ರಾಷ್ಟ್ರ ಧ್ವಜಾರೋಹಣವನ್ನು ಶ್ರೀಮತಿ ಕೆ.ವಿ. ಶಾಂತಕುಮಾರಿ ಶಶಿಧರ ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ಡಾ. ಹೆಚ್‌.ಎಸ್‌. ಮಂಜುನಾಥ ಕುರ್ಕಿ ಹಾಗೂ ನಾಡ ಧ್ವಜಾರೋಹಣವನ್ನು ಎಸ್‌.ಟಿ.ವೀರೇಶ್‌ ನೆರವೇರಿಸುವರು. ಕಾರ್ಯಕ್ರಮದಲ್ಲಿ ಮುದೇ ಗೌಡ್ರ ಗಿರೀಶ್‌, ನಾಗರಾಜ ಲೋಕಿಕೆರೆ, ನೀಲಕಂಠಪ್ಪ ಎಸ್‌, ಬೆಳವನೂರು ನಾಗರಾಜಪ್ಪ ಉಪಸ್ಥಿತರಿರುವರು.

ಬೆಳಿಗ್ಗೆ 9.30 ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಹನುಮಂತಪ್ಪ ಮೆರವಣಿಗೆ ಉದ್ಘಾಟಿಸುವರು. ಉಪಸ್ಥಿತಿ : ಗೀತಾ ದಿಳ್ಯಪ್ಪ, ವೀಣಾ ನಂಜಪ್ಪ, ಎಸ್‌.ಬಿ. ರುದ್ರಗೌಡ, ರವಿ ಸಿ.ಬಿ, ಹಾಲೇಶಪ್ಪ ಡಿ.ಡಿ, ಡಿ.ಎಂ. ಮಂಜುನಾಥಯ್ಯ, ಡಿ. ರಾಮಪ್ಪ, ರಾಜಶೇಖರ್‌ ಗುಂಡಗಟ್ಟಿ, ನಾರಾಯಣ ರಜಪೂತ್‌, ಕೆ.ಜಿ. ಭರತ್‌ರಾಜ್, ಪ್ರೊ. ಸಿ.ಹೆಚ್‌. ಮುರಿಗೇಂದ್ರಪ್ಪ, ಬಾಡದ ಆನಂದರಾಜ್, ಡಾ. ಬಿ.ಎಸ್‌. ನಾಗಪ್ರಕಾಶ್‌, ಹೆಚ್‌.ಎನ್. ಶಿವಕುಮಾರ್‌, ತೆಲಿಗೆ ರುದ್ರೇಶ್‌, ಮಹೇಶ್ವರಯ್ಯ ಎಸ್‌.ಎಂ, ಹೆಗ್ಗೇರೆ ರಂಗಪ್ಪ, ಶಶಿಧರ ಹೆಮ್ಮನಬೇತೂರು, ಬೆಳ್ಳೂಡಿ ಶಿವಕುಮಾರ್‌, ಎ. ಮಹಾಲಿಂಗಪ್ಪ, ಶಿವಕುಮಾರ್‌ ಕೋಗಲೂರು, ಎಂ. ತಿಪ್ಪಣ್ಣ ಯಕ್ಕನಹಳ್ಳಿ, ಜಿ.ಡಿ. ಗುರುಸ್ವಾಮಿ, ಜಿ.ಎನ್‌. ರುದ್ರಪ್ಪ ಯಕ್ಕನಹಳ್ಳಿ.

ಪುಸ್ತಕ ಮಳಿಗೆಗಳ ಉದ್ಘಾಟನೆಯನ್ನು ಸಿ.ಆರ್‌. ಪರಮೇಶ್ವರಪ್ಪ, ಚಿತ್ರಕಲಾ ಪ್ರದರ್ಶನ ಉದ್ಘಾಟನೆಯನ್ನು ಹೆಚ್‌.ಕೆ. ಲಿಂಗರಾಜ್‌ ಉದ್ಘಾಟಿಸುವರು. ದಾವಣಗೆರೆ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ.

ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯುವುದು. ಅಧ್ಯಕ್ಷತೆ : ಎಸ್‌.ಎ. ರವೀಂದ್ರನಾಥ್‌, ಉದ್ಘಾಟನೆ : ನಾಡೋಜ ಡಾ. ಮನು ಬಳಿಗಾರ್‌, ಡಾ. ಜಿ.ಎಸ್‌. ಶಿವರುದ್ರಪ್ಪ ವೇದಿಕೆ ಉದ್ಘಾಟನೆ : ಭೈರತಿ ಬಸವರಾಜ್. ಕೃತಿಗಳ ಬಿಡುಗಡೆ : ಜಿ.ಎಂ. ಸಿದ್ದೇಶ್ವರ, ಡಾ. ಶಾಮನೂರು ಶಿವಶಂಕರಪ್ಪ. ಸಮ್ಮೇಳನಾಧ್ಯಕ್ಷರು : ಎನ್‌.ಟಿ. ಯರಿಸ್ವಾಮಿ. ಕನ್ನಡ ಧ್ವಜ ಹಸ್ತಾಂತರ : ಡಾ. ಲೋಕೇಶ್‌ ಅಗಸನಕಟ್ಟೆ. ಮುಖ್ಯ ಅತಿಥಿಗಳು : ಎಂ.ಪಿ. ರೇಣುಕಾಚಾರ್ಯ, ಕೆ. ಮಾಡಾಳ್‌ ವಿರುಪಾಕ್ಷಪ್ಪ, ಎಸ್‌.ವಿ. ರಾಮಚಂದ್ರ, ಪ್ರೊ. ಎನ್‌. ಲಿಂಗಣ್ಣ, ಎಸ್‌. ರಾಮಪ್ಪ, ಮಹಾಂತೇಶ್‌ ಬೀಳಗಿ, ವಿಜಯ ಮಹಾಂತೇಶ್‌ ಬಿ. ದಾನಮ್ಮನವರ್‌, ವಿಶ್ವನಾಥ ಮುದಜ್ಜಿ, ಎನ್‌.ಕೆ. ನಾರಾಯಣ, ಎ.ಆರ್‌. ಉಜ್ಜಿನಪ್ಪ. ಪ್ರಾಸ್ತಾವಿಕ ನುಡಿ : ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ. ಸಮ್ಮೇಳನಾಧ್ಯಕ್ಷರ ಪರಿಚಯ : ಡಾ. ಪ್ರಕಾಶ್‌ ಹಲಗೇರಿ. ಅಧ್ಯಕ್ಷರಿಗೆ ಗೌರವ ಸಮರ್ಪಣೆ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ.

ಮಧ್ಯಾಹ್ನ 2 ಗಂಟೆಗೆ ಗೋಷ್ಠಿ-1 ರಲ್ಲಿ ಕನ್ನಡ ಕಾವ್ಯ ಮತ್ತು ವಿಶ್ವ ಮಾನವ ಪ್ರಜ್ಞೆ ಕುರಿತು ಮಾತನಾಡಲಾಗುವುದು. ಅಧ್ಯಕ್ಷತೆ : ಡಾ. ಎಂ.ಜಿ. ಈಶ್ವರಪ್ಪ, ಡಾ. ದಾದಾಪೀರ್‌ ನವಿಲೇಹಾಳ್‌, ಡಾ. ಎ.ಬಿ. ರಾಮಚಂದ್ರಪ್ಪ, ಪ್ರೊ. ಸಿ.ವಿ. ಪಾಟೀಲ್‌. ಸ್ವಾಗತ : ಬಿ. ವಾಮದೇವಪ್ಪ. ನಿರೂಪಣೆ : ರೇವಣಸಿದ್ದಪ್ಪ ಅಂಗಡಿ. ವಂದನಾರ್ಪಣೆ : ಮಂಜುನಾಥ ಇ.ಎಂ.

ಮಧ್ಯಾಹ್ನ 3.30 ಕ್ಕೆ ಗೋಷ್ಠಿ-2 ರಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಳು ವಿಷಯ ಕುರಿತು ಮಾತನಾಡಲಾಗುವುದು. ಅಧ್ಯಕ್ಷತೆ : ಪ್ರೊ. ಭಿಕ್ಷಾವರ್ತಿಮಠ, ಡಾ. ಆನಂದ ಋಗ್ವೇದಿ, ಡಾ. ಹೆಚ್‌.ಎಲ್‌. ಪುಷ್ಪಾ. ಸ್ವಾಗತ : ಎಂ.ಯು. ಚನ್ನಬಸಪ್ಪ. ನಿರೂಪಣೆ : ನಾಗರಾಜ್‌ ಕಾಕನೂರು. ವಂದನಾರ್ಪಣೆ : ಬಿ.ವಿ. ರಾಜಶೇಖರ್‌.

ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು. ಅಧ್ಯಕ್ಷತೆ : ರವಿಚಂದ್ರ. ಉದ್ಘಾಟನೆ : ಬಿ. ಪಾಲಾಕ್ಷಿ. ಮುಖ್ಯ ಅತಿಥಿಗಳು : ಬಿ.ಎನ್‌. ಗಿರೀಶ್‌.

error: Content is protected !!