ಪತ್ರಿಕೆ ಹಂಚುವ ಹುಡುಗರಿಗೆ ಶಾಸಕರಿಂದ ಜರ್ಕಿನ್ ಕೊಡುಗೆ

ರಾಣೇಬೆನ್ನೂರು, ಜು.18 – ವರದಿ, ಮುದ್ರಣ, ಹಂಚಿಕೆ ಹೀಗೆ ಪತ್ರಿಕೋದ್ಯಮ ದಿನದ 24 ಗಂಟೆಯೂ ಕಾರ್ಯೋನ್ಮುಖವಾ ಗಿರುತ್ತದೆ. ಉತ್ತಮ ಸಮಾಜ ನಿರ್ಮಾಣ ಮಾಡುವುದು ಇದರ ಗುರಿ ಎಂದು ಶಾಸಕ ಅರುಣ ಕುಮಾರ ಪೂಜಾರ ಹೇಳಿದರು.

ಅವರು ಇಲ್ಲಿನ ಆದಿಶಕ್ತಿ ಸಭಾಭವನದಲ್ಲಿ ಪತ್ರಿಕಾ ವಿತರಕರ ಸಂಘ ಮತ್ತು ಪತ್ರಿಕೆ ನಡೆಸಿದ ಪತ್ರಿಕಾ ದಿನಾಚರಣೆ ಉದ್ಘಾಟನೆ  ಹಾಗೂ ತಾವೇ ತರಿಸಿದ್ದ ಜರ್ಕಿನ್‍ಗಳನ್ನು ಪತ್ರಿಕೆ ಹಂಚುವ ಹುಡುಗರಿಗೆ ವಿತರಣೆ ಮಾಡಿ ಮಾತನಾಡುತ್ತಿದ್ದರು.

ಒಬ್ಬ ಒಳ್ಳೆಯ ಮುಖಂಡನನ್ನು ಬೆಳೆಸುವ, ಸಮಾಜದ್ರೋಹಿಯನ್ನು ನಾಶ ಮಾಡುವ ಶಕ್ತಿ ಈ ಪತ್ರಿಕೋ ದ್ಯಮಕ್ಕಿದೆ. ಇಲ್ಲಿ ಇರುವವರು ಸತ್ಯವನ್ನು  ಪ್ರತಿಪಾದಿಸಬೇಕು ಎಂದು ಅತಿಥಿಯಾಗಿದ್ದ ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಹೇಳಿದರು.

ಸಮಸ್ಯೆಗಳೇ ತುಂಬಿರುವ ಈ ಉದ್ಯಮವನ್ನು ಸರಿಪಡಿಸಿಕೊಂಡು ಪ್ರತಿದಿನ ಪತ್ರಿಕೆ ಹೊರತರುವುದು ಬಹಳ ಕಷ್ಟದಾಯಕ ಕೆಲಸ ಎಂದು ಔಷಧಿ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷ ರಮೇಶ ದುರ್ಗದಸೀಮಿ ಹೇಳಿದರು.

ರಮೇಶ ದುರ್ಗದಸೀಮಿ ಅವರು ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಿದರು. ಮಂಜು ನಾಥ ಕುಂಬಳೂರ ಪ್ರಾಸ್ತಾವಿಕ ಮಾತುಗಳನ್ನಾ ಡಿದರು.‌ ಪರಶುರಾಮ ಕಾಳೇರ ಸ್ವಾಗತಿಸಿದರು, ಮಂಜುನಾಥ ಹೊಸಪೇಟೆ ವಂದಿಸಿದರು. ಸಂಕಪ್ಪ ಮಾರನಾಳ ನಿರೂಪಿಸಿದರು.

error: Content is protected !!