ದಾವಣಗೆರೆ, ಏ.24- ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎನ್ನುವ ಹೆಸರನ್ನು ಮುಂಬರುವ ದಿನಗಳಲ್ಲಿ ಯಾವುದೇ ಸಂಘಟನೆಗಳು ಬಳಕೆ ಮಾಡುವಂತಿಲ್ಲ. ಸಮಿತಿ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ದೂರು ನೀಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಪತ್ರಿಕಾ ಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ. ಗೋಷ್ಟಿಯಲ್ಲಿ ಪ್ರೊ. ಜಿ.ವಿ. ಚಂದ್ರಣ್ಞ, ವಿಜಯಮ್ಮ, ಮಂಜುನಾಥ್ ಕುಂದವಾಡ, ಪರಮೇಶ್ ಪುರದಾಳ್, ಬೆನಕನಹಳ್ಳಿ ಪರಮೇಶ್, ಪ್ರದೀಪ್, ದುರ್ಗಾಪ್ರಸಾದ್, ಚಂದ್ರು, ಮಹಾಂತೇಶ್ ಇತರರು ಇದ್ದರು.
February 28, 2025