ದಾವಣಗೆರ, ಫೆ. 26- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಗೃಹ ಹಾಗೂ ವಾಣಿಜ್ಯ ಕಟ್ಟಡಗಳ ನಲ್ಲಿ ನೀರಿನ ಶುಲ್ಕ ಹಾಗೂ ಯು.ಜಿ.ಡಿ (ಒಳ ಚರಂಡಿ) ಶುಲ್ಕ ಬಾಕಿ ಉಳಿಸಿಕೊಂಡಿರುವ ಆಸ್ತಿದಾರರು ಬಾಕಿ ಇರುವ ನೀರಿನ ಬಳಕೆ ಶುಲ್ಕ ಮತ್ತು ಯುಜಿಡಿ ಶುಲ್ಕಗಳನ್ನು ಪಾವತಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ತಿಳಿಸಿದ್ದಾರೆ.
ಈಗಾಗಲೇ ಪಾಲಿಕೆ ಅಧಿಕಾರಿಗಳು ನೋಟಿಸ್ ಜಾರಿ ಮಾಡುತ್ತಿದ್ದು, ಕೆಲವು ಆಸ್ತಿ ಮಾಲೀಕರು ಶುಲ್ಕಗಳನ್ನು ಪಾವತಿಸದೇ ಅಪಾರ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿದ್ದು, ಇಂತಹ ಕಟ್ಟಡಗಳ ನಲ್ಲಿ ನೀರಿನ ಸಂಪರ್ಕ ಹಾಗೂ ಯು.ಜಿ.ಡಿ (ಒಳ ಚರಂಡಿ) ಸಂಪರ್ಕಗಳನ್ನು ಕಡಿತಗೊಳಿಸಲು ಪಾಲಿಕೆಯಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಆದ್ದರಿಂದ ಸದರಿ ಶುಲ್ಕಗಳನ್ನು ಬಾಕಿ ಉಳಿಸಿಕೊಂಡಿರುವ ಆಸ್ತಿದಾರರು ಪಾಲಿಕೆಗೆ ಶುಲ್ಕಗಳನ್ನು ಪಾವತಿಸಿ ಕ್ರಮವಾದ ರಶೀದಿ ಪಡೆದುಕೊಳ್ಳಬೇಕು.
ತಪ್ಪಿದಲ್ಲಿ ಮುಂದೆ ಯಾವುದೇ ರೀತಿಯ ನೋಟಿಸ್ / ಮುನ್ಸೂಚನೆ ನೀಡದೇ ನಲ್ಲಿ ನೀರು ಹಾಗೂ ಒಳಚರಂಡಿ ಸಂಪರ್ಕಗಳನ್ನು ಕಡಿತಗೊಳಿಸಲು ಕ್ರಮ ವಹಿಸಲಾಗುವುದು ಎಂದು ಆದೇಶಿಸಿದ್ದಾರೆ.