ದಾವಣಗೆರ, ಫೆ. 26- ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್‍ಗಳ ಮೂಲಕ ಜಾಹಿರಾತು ಪ್ರದರ್ಶಿಸಲು ಪಾಲಿಕೆಯಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಕಲಂ 138 ರೀತ್ಯಾ ಅಂತಹ ಜಾಹೀರಾತುಗಳನ್ನು ತೆಗೆದು ಹಾಕಲಾಗುವುದು ಹಾಗೂ ಇದರಿಂದ ಉಂಟಾಗುವ ಆರ್ಥಿಕ ನಷ್ಟಗಳಿಗೆ ಪಾಲಿಕೆ ಜವಾಬ್ದಾರಿಯಾಗಿರುವುದಿಲ್ಲ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಪಿ.ಮುದಜ್ಜಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಹಾನಗರಪಾಲಿಕೆಯ ಅನುಮತಿ ಪಡೆದುಕೊಳ್ಳದೇ ಶುಭಾಶಯ, ಅಭಿನಂದನೆ ಅಥವಾ ವಾಣಿಜ್ಯ ಹಾಗೂ ಇತ್ಯಾದಿ ಜಾಹೀರಾತುಗಳುಳ್ಳ ಫ್ಲೆಕ್ಸ್‍ಗಳನ್ನು ಅನಧಿಕೃತವಾಗಿ ಹಾಕುತ್ತಿರುವುದು ಕಂಡುಬರುತ್ತಿದ್ದು, ನಗರದ ಸೌಂದರ್ಯ ಹಾಗೂ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ. ಆದ್ದರಿಂದ ಯಾವುದೇ ವ್ಯಕ್ತಿಯಾಗಲೀ ಅಥವಾ ಸಂಸ್ಥೆಯಾಗಲೀ ಜಾಹೀರಾತು ಪ್ರದರ್ಶನಕ್ಕೆ ಪಾಲಿಕೆಯಿಂದ ಅನುಮತಿ ಪಡೆದುಕೊಳ್ಳದೇ ಹಾಕಿದರೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಎಂದು ತಿಳಿಸಿದರು.