ದಾವಣಗೆರೆ, ಫೆ.25 – ಹೆಚ್.ಎ.ಎಲ್. ಬೆಂಗಳೂರು ಇವರ ವತಿಯಿಂದ ಮೂರು ವರ್ಷದ ಡಿಪ್ಲೋಮದಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಡಿಪ್ಲೋಮಾ ಇನ್ ಏರೋನಾಟಿಕಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್, ಸಿವಿಲ್, ಕಂಪ್ಯೂಟರ್ ಸೈನ್ಸ್ /ಇನ್‍ಫರ್‍ಮೇಶನ್ ಸೈನ್ಸ್, ಮೆಟಲರ್ಜಿ & ಕಮರ್ಶಿಯಲ್ ಪ್ರ್ಯಾಕ್ಟಿಸ್ ತರಬೇತಿಗಳಲ್ಲಿ ತೇರ್ಗಡೆ ಹೊಂದಿರಬೇಕು. ಅರ್ಜಿಯನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ದಾವಣಗೆರೆ ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಮಾ.10 ಸಂಜೆ 5 ಗಂಟೆಯೊಳಗೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಆಡಳಿತ ಭವನ, ದಾವಣಗೆರೆ ಅಥವಾ ದೂ.ಸಂ: 08192-259446 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಉದ್ಯೋಗಾಧಿಕಾರಿ ಗಿರೀಶ್ ಕೆ.ಎನ್ ತಿಳಿಸಿದ್ದಾರೆ.