ದಾವಣಗೆರೆ, ಫೆ. 25- ನಗರದ ವಿಶ್ವಚೇತನ ಪದವಿ ಪೂರ್ವ ಕಾಲೇ ಜಿನಲ್ಲಿ ಈಚೆಗೆ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ನಗರದ ಮಿಲ್ಲತ್ ಪ.ಪೂ. ಕಾಲೇಜಿಗೆ ಪ್ರಥಮ ಸ್ಥಾನ ದೊರೆತಿದೆ. ದಾವಣಗೆರೆಯ ಮಿಲ್ಲತ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರಿ ಮೋತಿ ವೀರಪ್ಪ ಕಾಲೇಜಿನ ವಿದ್ಯಾರ್ಥಿಗಳನ್ನು ಸೋಲಿಸಿ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ. ಜುಲ್ಕರ್ ನೈನ್ ಬಾಷ, ಉಪನ್ಯಾಸಕರಾದ ಸೈಯದ್ ಖಾಲಿಖ್ ಹಾಗೂ ದೈಹಿಕ ಉಪನ್ಯಾಸಕ ರೋಷನ್ ಜಮೀರ್ ಉಪಸ್ಥಿತರಿದ್ದರು.
February 28, 2025