ಕೂಡ್ಲಿಗಿಯ ಪಿಎಸ್ಐಯಾಗಿ ಡಿ.ಸುರೇಶ್ ಇವರನ್ನು ಬಳ್ಳಾರಿ ಪೊಲೀಸ್ ಮಹಾ ನಿರೀಕ್ಷಕ ನಂಜುಂಡಸ್ವಾಮಿ ವರ್ಗಾವಣೆ ಮಾಡಿದ್ದು, ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿಂದೆ ಇದ್ದ ಕೂಡ್ಲಿಗಿ ಪಿಎಸ್ಐ ತಿಮ್ಮಣ್ಣ ಚಾಮನೂರು ಇವರನ್ನು ರಾಜ್ಯ ಗುಪ್ತವಾರ್ತೆ ಬಳ್ಳಾರಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆಯಾದ ಪ್ರಯುಕ್ತ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಕೊಪ್ಪಳ ಜಿಲ್ಲೆಯ ಕನಕಗಿರಿ ಪಿಎಸ್ಐ ಆಗಿರುವ ಡಿ.ಸುರೇಶ ಇವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಪಿಎಸ್ಐ ಡಿ.ಸುರೇಶ ಈ ಹಿಂದೆ ಕೂಡ್ಲಿಗಿ ತಾಲ್ಲೂಕಿನ ಕಾನಾಹೊಸಹಳ್ಳಿಯಲ್ಲಿ 2 ವರ್ಷ ಪಿಎಸ್ಐಯಾಗಿ ಸೇವೆ ಸಲ್ಲಿಸಿ ನಂತರ ಮೋಕಾ ಹಾಗೂ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪಿಎಸ್ಐಯಾಗಿ ಸೇವೆ ಸಲ್ಲಿಸಿದ್ದರು.
December 27, 2024