ದಾವಣಗೆರೆ, ಫೆ. 25- ನಗರದ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ನಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 27ರ ಶನಿವಾರ ಭರತ್ ಹುಣ್ಣಿಮೆ ಪ್ರಯುಕ್ತ ಹೋಮ, ಹವನ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಥಾ, ಪಲ್ಲಕ್ಕಿ ಉತ್ಸವ, ಪ್ರಧಾನ ದೇವತೆ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಿಗೆ ಮಹಾಮಂಗಳಾರತಿ ಕಾರ್ಯಕ್ರಮಗಳು ವಿಶೇಷವಾಗಿ ನಡೆಯಲಿವೆ.
ಶ್ರೀಮತಿ ಕೆ. ಗೀತಕುಮಾರಿ ಹಾಗೂ ಕುಟುಂಬದವರು ಪೂಜಾ ಸೇವಾಕರ್ತರಾಗಿದ್ದಾರೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್ ತಿಳಿಸಿದ್ದಾರೆ.