ಪುರಸಭೆ: ಶೇ.5ರ ತೆರಿಗೆ ರಿಯಾಯಿತಿ ವಿಸ್ತರಣೆ

ಹರಪನಹಳ್ಳಿ, ಫೆ.24 – ಆಸ್ತಿ ತೆರಿಗೆ ಮೇಲೆ ಶೇ.5 ರಷ್ಟು ರಿಯಾಯಿತಿ ಪಡೆಯುವ ಅವಕಾಶವನ್ನು ಮಾರ್ಚ್ -2021 ರ ಅಂತ್ಯದವರೆಗೂ ಸರ್ಕಾರ ವಿಸ್ತರಿಸಿ ಆದೇಶ ಹೊರಡಿಸಿದೆ.

ಈ ಕುರಿತು ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ಉಪಾಧ್ಯಕ್ಷೆ ನಿಟ್ಟೂರು ಭೀಮವ್ವ ಹಾಗೂ ಮುಖ್ಯಾಧಿಕಾರಿ ಬಿ.ಆರ್.ನಾಗರಾಜನಾಯ್ಕ್‍ ಅವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಆದ್ದರಿಂದ ಹರಪನಹಳ್ಳಿ ಪಟ್ಟಣದ ಪುರಸಭಾ ವ್ಯಾಪ್ತಿಯ ಎಲ್ಲಾ ತೆರಿಗೆದಾರರು, ಆಸ್ತಿ ಮಾಲೀಕರು, ತಮ್ಮ ತಮ್ಮ ಆಸ್ತಿ ತೆರಿಗೆಯ ಮೇಲಿನ ಶೇ.5 ರಷ್ಟು ವಿನಾಯಿತಿ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿ ಕೊಂಡು ಆಸ್ತಿ ತೆರಿಗೆಯನ್ನು ಪಾವತಿಸಿ ಪುರಸಭಾ ಸರ್ವ ತೋಮುಖ ಅಭಿವೃದ್ಧಿಗೆ ಸಹಕರಿಸಲು ಅವರು ಕೋರಿ ದ್ದಾರೆ. ತೆರಿಗೆ ಪಾವತಿ ಸಂಬಂಧ ಯಾವುದೇ ಮಾಹಿತಿ, ವಿಷಯ ತಿಳಿವಳಿಕೆಗಾಗಿ ಪುರಸಭಾ ಕಚೇರಿಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂರ್ಪಕಿಸಬಹುದು.

error: Content is protected !!