ದಾವಣಗೆರೆ, ಜು.15 – ಚರ್ಮ ಕುಶಲ ಕರ್ಮಿಗಳಿಗೆ ಸರ್ಕಾರದಿಂದ ನೀಡಲಾಗುವ ಕೋವಿಡ್-19 ಲಾಕ್‍ಡೌನ್ ಪರಿಹಾರಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಅವಧಿಯನ್ನು ಇದೇ ದಿನಾಂಕ 31 ರವರೆಗೆ ವಿಸ್ತರಿಸಲಾಗಿದೆ.
ಪಾದರಕ್ಷೆಗಳ ತಯಾರಿಕೆ, ದುರಸ್ತಿ ಹಾಗೂ ಚರ್ಮ ಹದ ಮಾಡುವ ಕಾಯಕದಲ್ಲಿ ತೊಡಗಿರುವ ಚಮ್ಮಾರರು, ಚರ್ಮಕುಶಲ ಕರ್ಮಿಗಳಿಗೆ ಸರ್ಕಾರ ರೂ.2000 ಪರಿಹಾರ ನೀಡುವ ಯೋಜನೆ ಘೋಷಿಸಿದ್ದು, ಅರ್ಹ ಚರ್ಮಕುಶಲ ಕರ್ಮಿಗಳು ಪರಿಹಾರ ಹಣ ಪಡೆಯಲು ಆನ್‍ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿ ಜುಲೈ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಪರಿಹಾರ ಧನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9741833307 ಕ್ಕೆ ಸಂಪರ್ಕಿಸಬಹುದು ಎಂದು ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಜಿಲ್ಲಾ ಸಂಯೋಜಕ ಜಯರಾಮಯ್ಯ ತಿಳಿಸಿದ್ದಾರೆ.