ಮಾಯಕೊಂಡ ತಾಲ್ಲೂಕಾಗಿ ಘೋಷಣೆಯಾಗಲಿ : ಶಾಸ್ತ್ರಿ
ದಾವಣಗೆರೆ, ಫೆ.24- ಇದೇ ಬಜೆಟ್‌ನಲ್ಲಿ ಮಾಯಕೊಂಡ ಗ್ರಾಮವನ್ನು ತಾಲ್ಲೂಕನ್ನಾಗಿ ಘೋಷಿಸಲಿ ಎಂದು ಮಾಯಕೊಂಡ ತಾಲ್ಲೂಕು ಹೋರಾಟ ಸಮಿತಿ ಹಾಗೂ ಮಾಯಕೊಂಡ ಪುರ ಅಭಿವೃದ್ಧಿ ಕ್ರಿಯಾಶೀಲ ವೇದಿಕೆಯು ಒತ್ತಾಯಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತು ನೀಡಿದಂತೆ ಘೋಷಣಾ ಕ್ರಮ ಕೈಗೊಂಡರೆ ಈ ಭಾಗದ ಜನರು ಅತೀವ ಸಂತೋಷ ಪಟ್ಟುಕೊಳ್ಳುವರು ಎಂದು ತಾಲ್ಲೂಕು ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ, ಪದಾಧಿಕಾರಿಗಳಾದ ನೀರಗಂಟಿ ಶ್ರೀನಿವಾಸ್, ಹೆಚ್.ಎಸ್. ವೆಂಕಟೇಶ್, ಎನ್. ಹನುಮಂತಪ್ಪ, ಬಸ್ ಮುರುಗೇಶಪ್ಪ, ನಾಗರಾಜಚಾರ್, ಫಕೀರಪ್ಪ ನಾಯಕ, ಎ.ಕೆ. ಯಲ್ಲಪ್ಪ, ಹುಣಸೆಹಣ್ಣು ಮೈಲಪ್ಪ ತಿಳಿಸಿದ್ದಾರೆ.