ದಾವಣಗೆರೆ, ಫೆ.23 – ಪ್ರಸ್ತುತ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಲಿ ವಕ್ಫ್ ಇಲಾಖೆಯ ಸೇವೆ ತುಂಬಾ ಕಷ್ಟಕರವಾಗಿದೆ ಅದರಲ್ಲೂ ಮಂಜೂರು ಅಗಿರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡು ಜಿಲ್ಲೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುವ ವಕ್ಫ್ ಇಲಾಖೆಯ ಅಧ್ಯಕ್ಷರು ಹಾಗೂ ಅಧಿಕಾರಿ ವರ್ಗದ ಸೇವೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಅವರು ಮುಕ್ತ ಕಂಠದಿಂದ ಪ್ರಶಂಸಿದರು.
ಇಲ್ಲಿನ ನೂರಾನಿ ಶಾದಿಮಹಲ್ನಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಆರು ವರ್ಷದ ಅವಧಿಯ ಅಂತಿಮ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸುಮಾರು 10 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಉತ್ತಮ ಕಾರ್ಯ ಮಾಡಿರುವ ವಕ್ಫ್ ಇಲಾಖೆಯ ಸೇವೆ ಸ್ಮರಣೀಯ ಲಾಕ್ಡೌನ್ ಸಂದರ್ಭದಲ್ಲಿ ಶವಗಳ ಅಂತ್ಯ ಸಂಸ್ಕಾರ (ದಫನ್) ಕಾರ್ಯ ಹಾಗೂ ಬಡವರಿಗೆ ನಿರ್ಗತಿಕರಿಗೆ ಸಹಾಯ ಸೌಲಭ್ಯ ಒದಗಿಸಿದ ವಕ್ಫ್ ಆಡಳಿತ ಮಂಡಳಿಯ ಸಮಿತಿಯ ಸದಸ್ಯರನ್ನು ಅಬ್ದುಲ್ ಜಬ್ಬಾರ್ ಅಭಿನಂದಿಸಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಸಿರಾಜ್ ಅಹಮದ್ ಮಾತನಾಡಿ, ತಾವು ತಮ್ಮ ಅವಧಿಯಲ್ಲಿ ಮಸೀದಿಗಳ ಅಭಿವೃದ್ಧಿ ಮತ್ತು ಜೀರ್ಣೋದ್ದಾರಕ್ಕಾಗಿ ಮೂರು ಕೋಟಿ ಐದು ಲಕ್ಷ, ಖಬರ್ ಸ್ಥಾನ ಕಾಂಪೌಂಡ್ ಗೋಡೆ ಸೇರಿದಂತೆ ವಿಶೇಷ ಅನುದಾನದ ಅಡಿಯಲ್ಲಿ ಸುಮಾರು ಹತ್ತು ಕೋಟಿ ರೂ. ಗಳಿಗಿಂತ ಹೆಚ್ಚಿನ ಅನುದಾನದಲ್ಲಿ ಸೇವೆ ಮಾಡಿರುವುದಾಗಿ ಹೇಳಿದರು.
ತಂಜಿಮ್ ಸಮಿತಿಯ ಮಾಜಿ ಅಧ್ಯಕ್ಷ ಸಾದಿಕ್ ಪೈಲ್ವಾನ್ ಅವರು ಮಾತನಾಡಿದರು. ಅಯೂಬ್ ಪೈಲ್ವಾನ್, ಟಾರ್ಗೆಟ್ ಅಸ್ಲಂ ಸೇರಿದಂತೆ ವಕ್ಫ್ ಸಲಹಾ ಸಮಿತಿಯ ಪದಾಧಿ ಕಾರಿಗಳಾದ ಮಹಮ್ಮದ್ ಅಸ್ಲಂ, ಎಂ.ಎನ್.ಸಮೀವುಲ್ಲಾ, ಕೆ.ಸಿರಾಜ್ ಅಹಮದ್, ಇಫ್ತೇ ಖಾರ್ ಅಹಮದ್, ಇಬ್ರಾಹಿಂ ಖಲೀಲುಲ್ಲಾ, ಫೈರೋಜ್ ಪಟೇಲ್, ಮಹಮ್ಮದ್ ಸಾಧಿಕ್, ಎ.ಮೈನುದ್ದೀನ್, ಬಷೀರ್ ಖಾನ್, ರಿಯಾಜ್ ಅಹಮದ್, ಕೆ.ಆರ್.ಅತಾವುಲ್ಲಾ, ಮೆಹಬೂಬ್ ಸಾಬ್, ಉಬೇದುಲ್ಲಾ, ನಜೀರ್ ಅಹಮದ್, ಡಿ.ಬಾಷ, ಆರ್.ಮಹಮದ್ ಇಬ್ರಾಹಿಂ ಆಲಂ ಪಾಷ, ಬಿ. ಖಾಜಾಪೀರ್ ಉಪಸ್ಥಿತರಿದ್ದರು.