ಗ್ರಾ.ಪಂ.ಗಳ ಮೀಸಲಾತಿ ಮರು ಪರಿಶೀಲನೆಗೆ ಆಗ್ರಹ

ದಾವಣಗೆರೆ, ಫೆ.23- ತಾಲ್ಲೂಕಿನ ಗ್ರಾಮ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಪುನರ್ ಪರಿಶೀಲಿಸಿ, ಮರು ನಿಗದಿ ಮಾಡದಿದ್ದರೆ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವುದಾಗಿ ಮೈಂಡ್ ಹಟರ್ಸ್ ಸಂಸ್ಥೆಯ ಅಧ್ಯಕ್ಷ ಸಿ.ಆರ್.ಅರುಣಕುಮಾರ್ ಎಚ್ಚರಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ನಿಗದಿಯಾಗಿರುವ ಮೀಸಲಾತಿಯಿಂದ ಹಲವು ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

 ಮೀಸಲಾತಿ ನಿಗದಿ ಮಾಡುವಾಗ ಕರ್ನಾಟಕ ಪಂಚಾಯತ್ ರಾಜ್-1993ರ ಅಧಿನಿಯಮ 44ರ ಮತ್ತು ರಾಜ್ಯ ಚುನಾವಣಾ ಆಯೋಗದ ರಾಜ್ಯಪತ್ರದ ಆದೇಶದ ನಿಯಮಾವಳಿಯನ್ನು ಜಿಲ್ಲಾಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಹೇಳಿದರು.

ದಾವಣಗೆರೆ ತಾಲ್ಲೂಕಿನ ಕೆಲ ಗ್ರಾ.ಪಂ.ಗಳಲ್ಲಿ ಎಸ್ಸಿ, ಎಸ್ಟಿ ಸದಸ್ಯರ ಸಂಖ್ಯೆ ಹೆಚ್ಚಿದ್ದರೂ ಈ ಹಿಂದೆ ಬಂದಿದ್ದ 2ಎ ಮೀಸಲಾತಿಯನ್ನೇ ಮುಂದುವರೆಸಲಾಗಿದೆ. 

ಒಟ್ಟಿನಲ್ಲಿ ಗ್ರಾ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಿಗದಿಯಾಗಿರುವ ಮೀಸಲಾತಿಯಲ್ಲಿ ನಿಯಮಾವಳಿ ಗಾಳಿಗೆ ತೂರಿದ್ದು, ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ ಮೀಸಲಾತಿಯನ್ನು ಮರು ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೈಂಡ್ ಹಟರ್ಸ್ ಕಾರ್ಯದರ್ಶಿ ಧನ್ಯನಾಯ್ಕ ಸಿ.ಡಿ ಹಾಜರಿದ್ದರು.

error: Content is protected !!