ರಾಣೇಬೆನ್ನೂರು, ಏ.23- ಕೋವಿಡ್ ಸೋಂಕು ವ್ಯಾಪಕವಾಗಿ ಹರಡು ತ್ತಿದ್ದು, ಸೋಂಕನ್ನು ಕಟ್ಟಿಹಾಕಲು ಬಿಗಿ ಕ್ರಮ ಕೈಗೊಳ್ಳಲಾಗುತ್ತಿದ್ದು, ತಾಲ್ಲೂಕಿನ ಎಲ್ಲಾ ಬಟ್ಟೆ ಅಂಗಡಿಗಳನ್ನು ಮೇ 4 ರವರೆಗೆ ಸಂಪೂರ್ಣ ಬಂದ್ ಮಾಡಲು ಆದೇಶಿಸಲಾಗಿದೆ ಎಂದು ತಹಶೀಲ್ದಾರ್ ಶಂಕರ್ ಮಾಧ್ಯಮಗಳಿಗೆ ತಿಳಿಸಿದರು.
ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಒಳಗೆ ವ್ಯಾಪಾರ ಮಾಡುವ ಹಾಗೂ ಕೊಳ್ಳುವವರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡುವ ವರ್ತಕರ ಬಗ್ಗೆ ದೂರುಗಳು ಕೇಳಿಬಂದಿದ್ದು, ಅಂತಹ ಚಟುವಟಿಕೆಗಳು ಕಂಡುಬಂದಲ್ಲಿ ಅವರ ಮೇಲೆ ಕಾನೂನಿನ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರರು ಎಚ್ಚರಿಕೆ ನೀಡಿದರು.
ಮದುವೆಗೆ 50, ಮಸಣಕ್ಕೆ 20 ಜನರು ತೆರಳಲು ಅವಕಾಶ, ಸಾರ್ವಜನಿಕ, ರಾಜಕೀಯ ಕಾರ್ಯಕ್ರಮಗಳು ಬಂದ್, ಬ್ಯಾಂಕ್, ವಿಮೆ ಮತ್ತು ಮಾಧ್ಯಮ ಸೇವೆ ನಿರಾತಂಕ. ಕಟ್ಟಡ ನಿರ್ಮಾಣಕ್ಕೆ ಅವಕಾಶ, ಚಲನಚಿತ್ರ, ಶಾಪಿಂಗ್, ಮಾಲ್, ಯೋಗ, ಜಿಮ್ಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ತಹಶೀಲ್ದಾರ್ ಶಂಕರ್ ವಿವರಿಸಿದರು.
ತಾಲ್ಲೂಕಿನ 24 ಕೇಂದ್ರಗಳಲ್ಲಿ ಪ್ರತಿದಿನ 15 ಸಾವಿರ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಈಗ 300 ಜನರಿಗೆ ಲಸಿಕೆ ಹಾಕುತ್ತಿದ್ದು, 1 ಸಾವಿರಕ್ಕೆ ಹೆಚ್ಚಿಸ ಲಾಗುತ್ತಿದೆ. ಅವಶ್ಯವಿದ್ದಷ್ಟು ಲಸಿಕೆ ಲಭ್ಯವಿದೆ ಎಂದು ಹೇಳಿದರು.