ದಾವಣಗೆರೆ, ಏ.20- ಕಳೆದ 14 ದಿನಗಳಿಂದ ಹೆಂಡತಿ, ಮಕ್ಕಳ ಸಮೇತ ವೇತನ ಹೆಚ್ಚಳಕ್ಕೆ ಆಗ್ರಹಿಸಿ, ಸಾರಿಗೆ ನೌಕರರು ನಡೆ ಸುತ್ತಿರುವ ಮುಷ್ಕರಕ್ಕೆ ಇದುವ ರೆಗೂ ಸ್ಪಂದಿಸದ ಸರ್ಕಾರದ ವಿರುದ್ಧ ಕೆಪಿಸಿಸಿ ಸದಸ್ಯ ಹೆಚ್. ದುಗ್ಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ಸರ್ಕಾರಿ ನೌಕರರು, ರೈತರು, ಮಹಿಳೆಯರು, ವೈದ್ಯರು, ವಿಕಲಚೇತನರು ಸೇರಿದಂತೆ, ಶ್ರಮಿಕ ವರ್ಗದವರು, ರಾಜಕಾರಣಿಗಳಿಗೆ ಮತ ನೀಡಿ ಪ್ರಧಾನಿ, ಮುಖ್ಯಮಂತ್ರಿ, ಸಂಸದರ, ಶಾಸಕರ ಪಟ್ಟಗಳನ್ನು ಕೊಟ್ಟಿರುವ ಮತದಾರ ಪ್ರಭುಗಳಿಗೆ ಶ್ರಮಕ್ಕೆ ತಕ್ಕ ಸವಲತ್ತುಗಳನ್ನು ನೀಡಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಾರಿಗೆ ನೌಕರರು ವೇತನ ಹೆಚ್ಚಿಸಲು ಒತ್ತಾ ಯಿಸಿ, ಹಸು ಗೂಸುಗಳ ಸಮೇತ ಮುಷ್ಕರ ನಡೆಸುತ್ತಿ ದ್ದರು. ಅವರ ಮೇಲೆ ಸರ್ಕಾರಕ್ಕೆ ಕಾಳಜಿ, ಕನಿಕರವಿಲ್ಲವೇ? ಅವರು, ಶ್ರಮಕ್ಕೆ ತಕ್ಕಂತೆ ವೇತನ ಹೆಚ್ಚು ಮಾಡಲು ಬೇಡಿಕೆ ಇಟ್ಟಿದ್ದಾರೆಯೇ ವಿನಃ ಬೇರೆ ಏನೂ ಕೇಳಿಲ್ಲ ಎಂದು ಕುಟುಕಿದ್ದಾರೆ.
ಸಾರಿಗೆ ನೌಕರರಷ್ಟೇ ಅಲ್ಲದೇ, ಕಳೆದ ನಾಲ್ಕು ತಿಂಗಳಿಂದಲೂ ರೈತರು ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸು ತ್ತಿದ್ದು, ದೇಶಕ್ಕೆ ಅನ್ನ ನೀಡುವ ರೈತರಿಗೂ ನ್ಯಾಯ ಸಿಗುತ್ತಿಲ್ಲ, ಜತೆಗೆ ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರು ಸಹ ಸರಿಯಾದ ಸಂಬಳಕ್ಕಾಗಿ ಮುಷ್ಕರ ನಡೆಸಬೇಕಾ ಯಿತು, ಕೆಲಸಕ್ಕೆ ತಕ್ಕ ವೇತನ ನೀಡದಿದ್ದ ಮೇಲೆ ಅವರಿಂದ ಏಕೆ ಕೆಲಸ ಪಡೆಯಬೇಕು? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಎಲ್ಲಾ 28 ಸಂಸದರು, ಶಾಸಕರು, ಮುಖ್ಯಮಂತ್ರಿಗಳಲ್ಲಿ ಯಾರೂ ಕಾರ್ಮಿಕರ, ನೌಕರರ ಬಗ್ಗೆ ಕಾಳಜಿ ತೋರುತ್ತಿಲ್ಲ. ಇವರೆಲ್ಲ ರಿಗೂ ಅಧಿಕಾರದಲ್ಲಿದ್ದಾಗಲೂ ವೇತನ, ಅಧಿಕಾ ರದಿಂದ ಕೆಳಗಿಳಿದಾಗಲೂ ಪಿಂಚಣಿ ದೊರೆಯು ತ್ತದೆ. ಇವರೆಲ್ಲರ ಕಷ್ಟಕ್ಕೆ ಸ್ಪಂದಿಸುವಂತೆ ಹೆಚ್. ದುಗ್ಗಪ್ಪ ಆಗ್ರಹಿಸಿದ್ದಾರೆ. ಕೂಡಲೇ ಶಾಸಕರು, ಮಂತ್ರಿಗಳು, ಸಂಸದರು ಸಾರಿಗೆ ನೌಕರರ ಕಷ್ಟಕ್ಕೆ ಸ್ಪಂದಿಸಿ, ಅವರ ನ್ಯಾಯಯುತ ಬೇಡಿಕೆ ಗಳನ್ನು ಈಡೇರಿಸುವಂತೆ ಅವರು ಒತ್ತಾಯಿಸಿದ್ದಾರೆ.