2ಎ ಮೀಸಲಾತಿಗೆ ಮುಸ್ಲಿಂರ ವಿರೋಧವಿಲ್ಲ : ಅಮಾನುಲ್ಲಾ ಖಾನ್

ದಾವಣಗೆರೆ, ಫೆ.22- ಮೀಸಲಾತಿ ವಿಚಾರಕ್ಕೆ ತುಳಿತಕ್ಕೊಳಗಾದ ಮುಸ್ಲಿಂ ಸಮಾಜವನ್ನು ಗುರಿಯಾಗಿಸಿಕೊಂಡು ನಾಡಿನ ಸಾಮರಸ್ಯ ಕದಡುವ ಶಾಸಕ ಅರವಿಂದ ಬೆಲ್ಲದ್‌ ನೀಡಿರುವ ಹೇಳಿಕೆಯನ್ನು ಭಾರತೀಯ ಜನತಾ ವೇದಿಕೆ ಜಿಲ್ಲಾ ಸಂಚಾಲಕ ಜೆ. ಅಮಾನುಲ್ಲಾ ಖಾನ್‌ ಖಂಡಿಸಿದ್ದಾರೆ.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಜನಾಂಗಕ್ಕೆ 2ಎ ಮೀಸಲಾತಿ ನೀಡುವುದಕ್ಕೆ ಮುಸ್ಲಿಮರು ವಿರೋಧ ಮಾಡಿಲ್ಲ. ಆದರೆ ಶಾಸಕ ಅರವಿಂದ ಬೆಲ್ಲದ್‌ ನೇರವಾಗಿ ಮುಸ್ಲಿಮರ ಶೇ. 4 ರ ಮೀಸಲಾತಿ ರದ್ದುಪಡಿಸಿ ನಮಗೆ ಕೊಡಿ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ಪ್ರಸ್ತುತ ಮುಸ್ಲಿಂ ಸಮುದಾಯದ ಸ್ಥಿತಿಗತಿ ಅವಲೋಕಿಸಿದರೆ ಅತ್ಯಂತ ಶೋಷಿತ, ಹಿಂದುಳಿದ ವರ್ಗ ಎಂಬುದು ಸಾಬೀತಾ ಗುತ್ತದೆ. ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಕೂಡ ಸಾಚಾರ್‌ ವರದಿ ಕುರಿತು ಮುಸ್ಲಿಮರ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ರಾಜಕೀಯ ವಲಯದಲ್ಲಿ ನಿವಾರಣೆ ತರುವಲ್ಲಿ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎಂದು ದೂರಿದರು. ಬೆಲ್ಲದ್‌ ಕೂಡಲೇ ಹೇಳಿಕೆ ಹಿಂಪಡೆದು ಮುಸ್ಲಿಮರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಟಿ. ಅಜ್ಗರ್‌, ಖಾದರ್‌ ಬಾಷಾ, ಕಾಲು ಮುಸ್ತಾಕ್, ಇಬ್ರಾಹಿಂ, ಸುಲೇಮಾನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!