ಮಲೇಬೆನ್ನೂರು, ಜು.10- ಪಟ್ಟಣದ ಹೊರವಲಯ ದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ ಬಿ.ವೀರಣ್ಣ ಅವರ ಸ್ಮರಣಾರ್ಥ ಅವರ ಕುಟುಂಬದವರು ವಿಶೇಷ ಪೂಜೆ, ಅಭಿಷೇಕ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷರೂ ಆದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಜೆಡಿಎಸ್ ಯುವ ಮುಖಂಡ ಹೆಚ್.ಎಸ್.ಅರವಿಂದ್, ಪಿಎಸ್ಐ ವೀರಬಸಪ್ಪ, ಹರಗನಹಳ್ಳಿ ರಾಜು, ದೇವಸ್ಥಾನ ಟ್ರಸ್ಟ್ನ ಬಿ.ಮಲ್ಲಿಕಾರ್ಜುನ್, ಬಿ.ನಾಗೇಶ್, ಬಿ.ಉಮಾಶಂಕರ್, ಬಿ.ವಿ.ರುದ್ರೇಶ್, ಬಿ.ಎನ್.ರುದ್ರೇಶ್, ಬಿ.ಶಂಭುಲಿಂಗಪ್ಪ, ಬಿ.ಸಿ.ರಾಜೇಶ್, ಎಸ್.ಎನ್.ಶಂಭು ಲಿಂಗಪ್ಪ, ಹೊಸಳ್ಳಿ ಕರಿಬಸಪ್ಪ, ಬಟ್ಟೆ ಅಂಗಡಿ ವಿಶ್ವನಾಥ್ ಮತ್ತಿತರರು ಭಾಗವಹಿಸಿದ್ದರು.
January 12, 2025