ಅಕ್ರಮ ಬಡಾವಣೆಗಳ ನಿರ್ಮಾಣದ ವಿರುದ್ಧ ಕ್ರಮ : ಶಿವಕುಮಾರ್‌

ಅಕ್ರಮ ಬಡಾವಣೆಗಳ ನಿರ್ಮಾಣದ ವಿರುದ್ಧ ಕ್ರಮ : ಶಿವಕುಮಾರ್‌ - Janathavaniದಾವಣಗೆರೆ, ಫೆ. 20 – ನಗರದ ಯರಗುಂಟೆ, ಅಶೋಕ ನಗರ ಹಾಗೂ ಬೂದಾಳಗಳಲ್ಲಿ ದೂಡಾ ಅನುಮತಿ ಪಡೆಯದೇ ಅಕ್ರಮವಾಗಿ ನಿರ್ಮಿಸಲಾಗುತ್ತಿರುವ ಬಡಾವಣೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದ್ದಾರೆ.

ನಗರದ ಎಂ.ಸಿ.ಸಿ. ಬಿ. ಬ್ಲಾಕ್‌ನಲ್ಲಿ ಪಾರ್ಕ್ ಒತ್ತುವರಿಯೊಂದನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳುವ ವೇಳೆ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಅಕ್ರಮ ಬಡಾವಣೆಗಳಿಗೆ ಕಲ್ಪಿಸಿರುವ ವಿದ್ಯುತ್ ಸಂಪರ್ಕ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಅಕ್ರಮ ಬಡಾವಣೆಗಳ ರಸ್ತೆ ಇತ್ಯಾದಿ ಸೌಲಭ್ಯಗಳನ್ನೂ ಸಹ ತೆರವುಗೊಳಿಸಲಾಗುವುದು ಎಂದವರು ಹೇಳಿದ್ದಾರೆ.

ಇಂತಹ ಬಡಾವಣೆಯಲ್ಲಿ ಈಗಾಗಲೇ ಮನೆ ಕಟ್ಟಿಕೊಂಡಿದ್ದರೆ ಅವುಗಳನ್ನು ತೆರವುಗೊಳಿಸು ವುದಿಲ್ಲ ಎಂದು ಸ್ಪಷ್ಟಪಡಿಸಿರುವ ಶಿವಕುಮಾರ್, ಈ ರೀತಿಯ ಅಕ್ರಮ ಬಡಾವಣೆಗಳ ನಿರ್ಮಾಣಕ್ಕೆ ತಮ್ಮ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಜನಸಾಮಾನ್ಯರು ಇಂತಹ ಅಕ್ರಮ ಬಡಾವಣೆಗಳಲ್ಲಿ ನಿವೇಶನ ತೆಗೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದ್ದಾರೆ.

ಕುಂದುವಾಡ ಕೆರೆಯ ಬಳಿಯ ದೂಡಾ ಜಾಗ ಒತ್ತುವರಿ ಮಾಡಿರುವುದು ಗಮನಕ್ಕೆ ಬಂದಿದ್ದು, ಅದನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದೇ ರೀತಿ, ಜಿಲ್ಲಾಧಿಕಾರಿಗಳ ಕಚೇರಿಯಿಂದ ಕುಂದುವಾಡ ಕೆರೆಗೆ ಹೋಗುವ ಜೋಡಿ ರಸ್ತೆಯಲ್ಲಿರುವ ಬಸವೇಶ್ವರ ಲೇಔಟ್‌ನಲ್ಲಿ ದೂಡಾಗೆ ಸೇರಿದ ಕಾಲು ಎಕರೆ ಜಾಗದಲ್ಲಿರುವ ಉದ್ಯಾನವನದಲ್ಲಿ ಎರಡು ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಇವುಗಳಿಗೆ ನೀಡಿರುವ ಡೋರ್ ನಂಬರ್ ಹಾಗೂ ಕಟ್ಟಡದ ಅನುಮತಿ ರದ್ದುಗೊಳಿಸುವಂತೆ ನಗರ ಪಾಲಿಕೆಗೆ ಕೇಳಲಾಗಿದೆ. ನಂತರ ಕಟ್ಟಡಗಳನ್ನು ತೆರವುಗೊಳಿಸಲಾಗುವುದು ಎಂದವರು ಹೇಳಿದ್ದಾರೆ.

ಸಾರ್ವಜನಿಕರು ಮನೆ ಕಟ್ಟಿಕೊಳ್ಳುವುದಕ್ಕೆ ಮುಂಚೆ ಸಕ್ಷಮ ಪ್ರಾಧಿಕಾರವಾದ ದೂಡಾ ಬಳಿ ಮೊದಲು ಪರಿಶೀಲಿಸಿ ಅನುಮತಿ ಪಡೆದುಕೊಳ್ಳಬೇಕು. ಅಕ್ರಮ ಬಡಾವಣೆ, ಇಲ್ಲವೇ ಸಕ್ರಮ ಬಡಾವಣೆಗಳಲ್ಲಿ ಅಕ್ರಮವಾಗಿ ರೂಪಿಸಲಾಗಿರುವ ನಿವೇಶನಗಳಲ್ಲಿ ಮನೆ ಕಟ್ಟಿದರೆ ನಂತರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದವರು ಹೇಳಿದ್ದಾರೆ.

ತಮ್ಮ ಹಿಂದಿನ ಅಧಿಕಾರವಧಿಯಲ್ಲಿ ನಿಜಲಿಂಗಪ್ಪ ಬಡಾವಣೆಯಲ್ಲಿ ನೂರಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರ ಮವಾಗಿ ರೂಪಿಸಲಾಗಿದೆ. ಅಲ್ಲದೇ ಬಡವರಿಗೆ ಗುಂಪು ಮನೆ ನಿರ್ಮಿಸಲು ಇರಿಸಲಾಗಿದ್ದ ಮತ್ತು ಸಿ.ಎ. ನಿವೇಶನ ಗಳ ಜಾಗವನ್ನೂ ಅಕ್ರಮವಾಗಿ ನಿವೇಶನ ಮಾಡಿ ಹಂಚ ಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸಿ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

ನಗರಾದ್ಯಂತ ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಜಾಗವನ್ನು ಅಕ್ರಮವಾಗಿ ಕಬಳಿಸಿರುವ ಅಂದಾ ಜಿದೆ. ತಮ್ಮ ಅವಧಿಯಲ್ಲಿ ಸುಮಾರು 100 ಕೋಟಿ ರೂ. ಮೌಲ್ಯದ ಜಾಗ ಅಕ್ರಮವಾಗಿ ಪರಭಾರೆಯಾಗುವುದನ್ನು ತಡೆಯಲಾಗಿದೆ ಎಂದೂ ಅವರು ಹೇಳಿದ್ದಾರೆ.

error: Content is protected !!